ಚಿತ್ರದುರ್ಗ: ಹೊಳಲ್ಕೆರೆ ಆಸ್ಪತ್ರೆಗೆ ಬರುವ ರೋಗಿಗಳ ಪ್ರಾಣ ಉಳಿಸುವ ಪರಮ ಪವಿತ್ರವಾದ ವೃತ್ತಿಗೆ,ಜನರು ಗೌರವ ನೀಡುವಂತೆ ನೀವುಗಳು ನಡೆದುಕೊಳ್ಳ ಬೇಕು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ವೈದ್ಯರು ರಿಗೆ ಕರೆ ನೀಡಿದರು.
ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಡಾ.ಬಿಂಧನ್ ಚಂದ್ರರಾಯ್ ಭಾವಚಿತ್ರಕ್ಕೆ ಪುಷ್ಪಾರ್ಚ ನೆ ಸಲ್ಲಿಸಿ. ಮಾತನಾಡಿ.ವೈದ್ಯರನ್ನು ಜನ ದೇವರಂತೆ ಕಾಣು ತ್ತಾ ರೆ. ಪರಮ ಪವಿತ್ರವಾದ ವೃತ್ತಿ ನಿಮ್ಮದು. ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ವೈದ್ಯರು ರಾದ ನಿಮ್ಮ ಕೈಯಲ್ಲಿ ಜನರ ಪ್ರಾಣ ಉಳಿಸ ಬಹುದು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸರಿ ಯಾದ ಚಿಕಿತ್ಸೆ ನೀಡಿ. ನಿಮ್ಮ ಕರ್ತವ್ಯ ನಿರ್ವಹಿಸಿ. ಒತ್ತ ಡ,ಸಮಸ್ಯೆ, ಪರಿಸ್ಥಿತಿಗನುಗುಣವಾಗಿ ಪ್ರತಿಯೊಬ್ಬರಿಗೂ ಕಾಯಿಲೆ ಬರುವುದು ಸಹಜ.ದಿನನಿತ್ಯವು ವ್ಯಾಯಾಮ ,ವಾಯು ವಿಹಾರ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ನಿಮ್ಮ ಆರೋಗ್ಯ ನಿಮ್ಮ ಕೈ ಯಲ್ಲಿದೆ.ಸೇವೆಗೆ ಮಹತ್ವ ಕೊಡುವ ದಿನ ಇದಾಗಿರು ವುದರಿಂದ ವೈದ್ಯರುಗಳು ತಮ್ಮ ಜವಾಬ್ದಾರಿ ಅರಿತು, ಕೆಲಸ ಮಾಡಬೇಕೆಂದು ತಿಳಿಸಿದರು.
ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿ ತಾಧಿಕಾರಿ ವಿನಯ್ ಪಿ.ಸಜ್ಜನ್, ಕನ್ನಡ ಸಾಹಿತ್ಯ ಪರಿಷ ತ್ತ್ ತಾಲ್ಲೂಕು ಅಧ್ಯಕ್ಷ ಎನ್.ಶಿವಮೂರ್ತಿ, ಗೌರವಾಧ್ಯ ಕ್ಷ ಎಸ್.ಮಾರುತೇಶ್, ಡಾ.ಶಿವಲಿಂಗಪ್ಪ,ಬ್ರಹ್ಮಕುಮಾರಿ ವಿಶ್ವ ವಿದ್ಯಾ ನಿಲಯದ ಸುಮಿತ್ರಕ್ಕ, ಗಂಗಾಧರಪ್ಪ, ಕವಿ ವೀರೇಶ್ಕುಮಾರ್, ಜೆ.ಎ.ದೇವರಾಜಯ್ಯ, ವೈದ್ಯಾಧಿಕಾ ರಿಗಳು, ಅಂಗನವಾಡಿ ಕಾರ್ಯಕರ್ತರು ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.