ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಶನ್ರವರ ರಂಗದ ಪಯಣದಲ್ಲಿ, ಹಲವಾರು ವೈವಿಧ್ಯಮಯ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಪ್ರೇಕ್ಷಕರಿಗೆ ಮನಸ್ಸಿಗೆ ಹತ್ತರವಾಗುತ್ತಿದರೆ – ಯಾವುದೆ ನಾಟಕ ಕಟ್ಟಿದರೂ, ಒಂದು ಸಂದೇಶವನ್ನು ತಲುಪಿಸೋವುದು ತಂಡದ ಮೂಲ ಉದ್ದೇಶ. ಅದೇ ನಿಟ್ಟಿನಲ್ಲಿ ಈಗ ತಂಡ ಹೊಸ ನಾಟಕದ ರಚನೆ, ವಿನ್ಯಾಸ, ಸಂಗೀತ, ಸಾಹಿತ್ಯ, ಸಂಭಾಷಣೆ, ರಂಗ ಸಜ್ಜಿಕೆ, ನೃತ್ಯ, ನಿರ್ದೇಶನ, ಬೆಳಕು – ಎಲ್ಲವನ್ನು ತಂಡದವರೇ ಸೇರಿ ಮಾಡಿದ್ದೇರೆ.
`ಅನವರತ’- ಈ ನಾಟಕ ನಮ್ಮ ತಂಡದ ಕನಸಿನ ಕೂಸು ಎನ್ನಬಹುದು. ಅನವರತ ನಾಟಕ ಬಹು ಯಶಸ್ವಿ ಪ್ರದರ್ಶನಗಳೊಂದಿಗೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. ಗೌರವಾನ್ವಿತ ರಂಗಭೂಮಿ ವ್ಯಕ್ತಿಗಳಾದ ವಿದ್ವಾನ್ ಎಸ್ ಶಂಕರ್, ಡಾ. ಬಿ.ವಿ. ರಾಜಾರಾಂ ಮತ್ತು ಮಾಲತಿ ಸುಧೀರ್ರಿಂದ ಮನ್ನಣೆ ಮತ್ತು ಪ್ರಶಂಸೆಯನ್ನು ಗಳಿಸಿದೆ. ಇದೇ ಶನಿವಾರ ನವೆಂಬರ್ 30ರಂದು, ಸಂಜೆ 7ಕ್ಕೆ, ಕಲಾಮಂದಿರದಲ್ಲಿ ಮತ್ತೆ ನಿಮ್ಮ ಮುಂದೆ ಪ್ರದರ್ಶನಕ್ಕೆ ಸಜ್ಜಾಗಿದೆ ಅನವರತ .
`ಅನವರತ’ ಕಲೆಗಾಗಿ ಕಲೆ: ಹೊರನೋಟಕ್ಕೆ ಈ ವಾಕ್ಯ ಸಾಮಾನ್ಯವಾಗಿ ಕಂಡರು, ಇದರ ಆಳಕ್ಕೆ ಇಳಿದಷ್ಟು, ಅರ್ಥ ಸೃಷ್ಟಿಯ ಮೂಲಕ್ಕೆ ಕರೆದೊಯ್ಯುತ್ತದೆ, ಜಗತ್ತಿನ ಸೃಷ್ಟಿಯೇ ಒಂದು ಕಲೆ ಎನ್ನಬಹುದು.
ಕಲೆಯನ್ನು ನಾವು ಹೇಗೆ ನೋಡುತ್ತೇವೆ, ಕೇವಲ ಒಂದು ಮನೋರಂಜನಾ ವಸ್ತುವಾಗಿಯೋ, ಮನಸ್ಸಿಗೆ ಉಲ್ಲಾಸವನ್ನು ನೀಡುವ ಕ್ರಿಯೆಯಾಗೊ, ಜೀವನ ಶೈಲಿಯಾಗಿಯೋ, ಆತ್ಮ ಶುದ್ಧಿಗೊಳಿಸುವ ಪ್ರಕ್ರಿಯೆಯಾಗಿಯೊ, ಆ ನ ಕೃ ಅವರ ದೃಷ್ಟಿಯಲ್ಲಿ, ಕಲೆಗಳಲ್ಲಿ ಪರಾಮಕಲೆ, ಜೀವನದ ಲಲಿತಕಲೆ.
ಎಲ್ಲವೂ ನಾವು ನೋಡುವ, ಗ್ರಹಿಸುವ, ಅರ್ಥೈಸಿಕೊಳ್ಳುವ ದೃಷ್ಟಿಯಲ್ಲಿ ಕಲೆ ತನ್ನ ವಿಶ್ವರೂಪ ದರ್ಶನವನ್ನು ಪ್ರದರ್ಶಿಸುತ್ತದೆ.
ಕಲೆಯ ಆಯಾಮಗಳು, ಕಲೆಯ ಅಸ್ತಿತ್ವವು ದೈನಂದಿಕ ಬದುಕಿನಲ್ಲಿ ಮೇಲುನೋಟಕ್ಕೆ ಕಣ್ಮರೆಯಾಗಿದ್ದರೂ, ಕಲೆಯನ್ನು ಕೇವಲ ಮನೋರಂಜನೆಯಲ್ಲೇ ಮುಕ್ತಾಯವಾಗಿದೆ, ಸಾಮಾಜಿಕ ಪಿಡುಗಿನ, ಆಗು ಹೋಗುಗಳ ಬಗ್ಗೆ ಅರಿವು ಮೂಡಿಸುವುದು, ಧನಾಥ್ಮಕವಾದ ವಿಚಾರವನ್ನು ಮೂಡಿಸುವುದು, ದೈಹಿಕವಾಗಿ, ಬೌದ್ಧಿಕವಾಗಿ, ಆರೋಗ್ಯವಂತರಾಗಿ ಇರುವಂತೆ ಪ್ರೇರೇಪಿಸಿ, ಸಾಮಾಜಿಕಸ್ವಾಸ್ಥ್ಯವನ್ನು ಕಾಪಾಡುವುದು!!
ಹೇಗೆ ಸಮಾಜಕ್ಕೂ ಕಲೆಗೂ ಅವಿನಾಭಾವ ಸಂಬಂಧವೋ ಹಾಗೆ ಕಲಾವಿದನಿಗು – ಕಲೆಗು, ಜೀವಾತ್ಮ – ಪರಮಾತ್ಮನಿಗೂ ಇರುವ ಸಂಬಂಧವನ್ನು ತೋರುತ್ತದೆ. ಈ ನಾಟಕವು ಕಲೆ ಹಾಗು ಕಲಾವಿದನ ಭಾವೈಕ್ಯತೆಯನ್ನು ಹಂತ ಹಂತವಾಗಿ ಕಲಾವಿದನು ಸಾಗುವ ಹಾದಿಯಲ್ಲಿ ಕಲೆಯನ್ನು ಹೇಗೆ ಆಹ್ಲಾದಿಸುತ್ತ, ಆಶ್ಚರ್ಯದಿಂದ ಅದರ ಆಯಾಮಗಳನ್ನು ಅನುಭವಿಸುತ್ತಾ, ಅವಮಾನಿಸುತ್ತ, ಅವಹೇಳಿಸಿ, ಹತಾಶನಾಗಿ ಕೊನೆಗೆ ಕಲೆಗಾಗಿ ಕಲೆಯೆಲ್ಲ ಉಳಿಯುತ್ತಾನೋ ಅಥವಾ ಕಲೆಯನ್ನು ತ್ಯಜಿಸುತ್ತಾನೋ ಎನ್ನುವುದೇ ಇದರ ಕಥಾ ಹಂದರ.