ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೃಷಭಾವತಿ ನಗರದಲ್ಲಿ ನಾಗೇಶ್ ಕೊಂಡ 25 ವರ್ಷದ ಯುವಕ ನಿನ್ನೆ ಮದ್ಯಪಾನ ಮಾಡಿ ತನ್ನ ಸ್ನೇಹಿತೆಯೊಂದಿಗೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ನಡೆದು ಹೋಗುವಾಗ ಅಪರಿಚಿತ ವ್ಯಕ್ತಿ ನನ್ನ ಮುಖಕ್ಕೆ ಯಾವುದೋ ಕೆಮಿಕಲ್ ಹಾಕಿ ಪರಾರಿಯಾಗಿರುತ್ತಾರೆ ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾನೆ.
ಕಾಮಾಕ್ಷಿಪಾಳ್ಯ ಪೊಲೀಸರು ನಾಗೇಶ್ ಕೊಂಡ ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ದೂರನ್ನು ದಾಖಲು ಮಾಡಿಕೊಂಡು ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಲು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿರುತ್ತಾರೆ.