ರಾಮನಗರ: ಇತ್ತೀಚೆಗೆ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಒಂದಲ್ಲ ಒಂದು ಅವಾಂತರಗಳು ದಿನನಿತ್ಯ ನಡೆಯುತ್ತಲೇ ಇದೆ, ಇದಕ್ಕೆ ಪೂರಕವೆಂಬಂತೆ ರಾಮನಗರ ತಾಲ್ಲೂಕಿನ ಎರೇಹಳ್ಳಿಯ ಇರುಳಿಗರದೊಡ್ಡಿ ಗ್ರಾಮದ ಮರಿಲಿಂಗ ಎಂಬಾತನ ಮೇಲೆ ರಾತ್ರಿ ಕರಡಿ ದಾಳಿ ನಡೆಸಿದೆ.
ಎರೇಹಳ್ಳಿ- ಇರುಳಿಗರದೊಡ್ಡಿ ನಡುವಿನ ಕಣ್ವ ಹೊಳೆ ಬಳಿ ಘಟನೆ ನಡೆದಿದ್ದು, ಗಾಯಗೊಂಡಿರುವ ವ್ಯಕ್ತಿ ಮರಿಲಿಂಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರಾವನಿಸಲಾಗಿದೆ.
ಇತ್ತ ರೈತರು ಗ್ರಾಮಸ್ಥರು ದಿನನಿತ್ಯ ಆತಂಕದಲ್ಲೇ ಹೊಲ ಗದ್ದೆಗೆ ಓಡಾಡುವ ದುಸ್ಥಿತಿ ಎದುರಾಗಿದ್ದು ಸಂಬಂಧ ಪಟ್ಟವರು ಇದಕ್ಕೆ ಶಾಶ್ವತ ಪರಿಹಾರ ಕೊಡಿಸಬೇಕು ಎಂಬುದು ಗ್ರಾಮಸ್ಥರ ಅಳಲಾಗಿದೆ.



