ಬೆಂಗಳೂರು: ಏಳು ಯುವಕರುಗಳು ಏಳು ದ್ವಿಚಕ್ರ ವಾಹನಗಳಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಿದ್ದವರನ್ನು ಏಳು ಸಂಚಾರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂಧಿಸಿ ಅವರುಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ ವಾಹನಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
281 ಬಿ ಎನ್ ಎಸ್ ಮತ್ತು ಕಲಾಂ 189, 129 ರೆಡ್ ವಿತ್ 177 ಐಎಂವಿ ಆಕ್ಟ್ ರಿತ್ಯ ಎಫ್ಐಆರ್ ದಾಖಲಿಸಿರುತ್ತಾರೆ.
ಜ್ಞಾನಭಾರತಿ ಪೊಲೀಸ್ ಠಾಣಾ, ಹಲಸೂರು, ಪುಲಕೇಶಿ ನಗರ, ಜೀವನ್ ಭೀಮಾ ನಗರ, ಕೆ ಆರ್ ಪುರ ಈ ಠಾಣಾ ವ್ಯಾಪ್ತಿಗಳ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.