ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರುಗಳನ್ನು “ಬಾಲಪರಾಧಿ ನ್ಯಾಯ ಕಾಯ್ದೆ” ಅಡಿ ಪ್ರಕರಣಗಳನ್ನು ಪುಲಕೇಶಿ ನಗರ ಮತ್ತು ಬಾನಸ್ವಾಡಿ ಸಂಚಾರಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ ವಾಹನಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಜೀವನ್ ಭೀಮ ನಗರ ಶಿವಾಜಿನಗರ, ಪುಲಕೇಶಿ ನಗರ ಪೊಲೀಸರು ನಿನ್ನೆ ವಿಶೇಷ ಕಾರ್ಯಾಚರಣೆ ನಡೆಸಿ ಹಳೆ ಭದ್ರಾಸ್ ರಸ್ತೆ ಬಾನಸ್ವಾಡಿ ಮುಖ್ಯ ರಸ್ತೆ ಮತ್ತು ಬಿ ಆರ್ ವಿ ಜಂಕ್ಷನ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ವ್ಹೀಲ್ಲಿಂಗ್ ಮಾಡುತ್ತಿದ್ದ ಒಟ್ಟು ಐದು ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.
ಇದಲ್ಲದೆ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರಿ ಪೂರ್ವ ವಿಭಾಗದ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರುಗಳ ವಿರುದ್ಧ 350 ಪ್ರಕರಣಗಳನ್ನು ದಾಖಲಿಸಿಕೊಂಡು ಒಂದು ಲಕ್ಷದ ಎಪ್ಪತ್ತೇಳು ಸಾವಿರ ರೂ ದಂಡ ಕಟ್ಟಿಸಿಕೊಂಡಿರುತ್ತಾರೆ.