ಬೆಂಗಳೂರು: ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ಬಲಪಡಿಸಲು ವೇದಿಕೆ ಸಿದ್ಧ ಗೊಂಡಿದೆ.ಮಾಜಿ ಶಾಸಕರನ್ನು ಒಗ್ಗೂಡಿಸಿ ಎಂ.ಪಿ.ರೇಣುಕಾಚಾರ್ಯ ಹಾಗೂ ತಂಡ ಸಜ್ಜು ಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಧ್ಯ ಕರ್ನಾಟಕ ಭಾಗದಿಂದಲೇ ಬಲವರ್ಧನೆ ಮಾಡಿ, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಮಾಜಿ ಶಾಸಕರನ್ನು ಒಗ್ಗೂಡಿಸುವ ಮೂಲಕ ವಿಜಯೇಂದ್ರ ಪಕ್ಷ ಸದೃಢಗೊಳಿಸಲು ಕಾರ್ಯತಂತ್ರ ರೂಪಿಸತೊಡಿಗದ್ದಾರೆ.
ಕಳೆದ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೆ ಮೀರಿದ ಹಿನ್ನಡೆ ಸಾಧೀಸಲಾಗಿತ್ತು. ಹಿನ್ನಡೆ ಬಳಿಕ ಎಚ್ಚೆತ್ತು ಮುಂದೆ ಚುನಾವಣೆಗೆ ಅಣಿಯಾಗಲು ಮುಂದಾದ ವಿಜಯೇಂದ್ರ.ಸೋತಿರುವ ಕ್ಷೇತ್ರಗಳ ಮಾಜಿ ಶಾಸಕರನ್ನು ಒಂದುಗೂಡಿಸಿ, ಈಗಿನಿಂದಲೇ ಚುನಾವಣೆಗೆ ರಣಕಹಳೆ ಊದಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮಧ್ಯ ಕರ್ನಾಟಕ ಭಾಗದ ದಾವಣಗೆರೆಯಲ್ಲಿ ಸಮಾವೇಶ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ಸಮಾವೇಶ ನಡೆಸಲು ಮುಂದಾದ ಬಿಜೆಪಿ ನಾಯಕರುಗಳು ಆ ಮೂಲಕ ಮಾಜಿ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಲು ವಿಜಯೇಂದ್ರ ಕಾರ್ಯತಂತ್ರ ರೂಪಿಸತೊಡಗಿದ್ದಾರೆ.