ದೇವನಹಳ್ಳಿ: ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ “ವಚನ ಸಂಭ್ರಮ” ಹಾಗೂ ವಿಜಯಪುರದ ಬಂಗಲೆ ಕುಟುಂಬ ಮತ್ತು ಶ್ರೀ ಸಾಕ್ಷಿ ಮುರುಘ ಸೇವಾ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ವಿಜಯಪುರ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ ಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹಡಪದ ಮಾತನಾಡಿ ಹನ್ನೆರಡನೆಯ ಶತಮಾನದಲ್ಲಿ ಶಿವ ಶರಣರಿಂದ ರಚನೆಯಾದ ವಚನಗಳು ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಯೋಗ್ಯ ಮಾರ್ಗದರ್ಶನ ಮಾಡುವಲ್ಲಿ ಸಹಕಾರಿಯಾಗಿದೆ. ಶರಣರ ವಚನಗಳನ್ನು ಅಧ್ಯಯನ ಮಾಡಿ ಅವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿ ಜೀವನ ನಡೆಸಬಹುದು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಸಾಕ್ಷಿ ಮುರುಘ ಸೇವಾ ಟ್ರಸ್ಟ್ನ ಸದಸ್ಯರಾದ ಶ್ರೀಮತಿ ಮೀನಾಸುರೇಶ್ ಬಾಬು, ಶ್ರೀಮತಿ ವಿಮಲಾಂಬ ಅನಿಲ್ ಕುಮಾರ್ ರವರು ವಚನ ಗಾಯನ ನಡೆಸಿಕೊಟ್ಟರು ನಂತರ ದೇವನಹಳ್ಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕವಿ ಮ ಸುರೇಶ್ ಬಾಬು ಸಮಯದ ಮಹತ್ವದ ಕುರಿತಾಗಿ ಮಾತನಾಡುತ್ತ ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ,ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ವಚನಗಳು ಕಲಿಸಿ ಕೊಡುತ್ತದೆ ಎನ್ನುತ್ತ ಸ್ವರಚಿತ ಕವಿತೆ ವಾಚಿಸುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೊಬ್ಬ ಅತಿಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಡಾ ನಂದೀಶ್, ಮಾತನಾಡುತ್ತಾ ದೇವನಹಳ್ಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂಬುದಾಗಿ ಅಭಿಪ್ರಾಯ ಪಟ್ಟರು.
ಪತ್ರಿಕಾ ವರದಿಗಾರ ಹರೀಶ್ ಶಾಲಾ ಶಿಕ್ಷಕರಾದ ಶ್ರೀ ನಾರಾಯಣಸ್ವಾಮಿ ಶಿಕ್ಷಕಿಯರಾದ ಪ್ರತಿಭಾ ನಾಯಕ್,ಆರತಿ ಪತ್ತಾರ್,ಸವಿತಾ, ಗಿರಿಜಮ್ಮ ಹಾಗೂ ಅತಿಥಿ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ವಚನ ಗಾಯನ ಮಾಡಿದ ವಿದ್ಯಾರ್ಥಿನಿಯರಿಗೆ ವಚನದ ಪುಸ್ತಕ ವಿತರಿಸಲಾಯಿತು.ಇದೇ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದ ಪತ್ರಿಕಾ ವರದಿಗಾರ ಹರೀಶ್ ವಿದ್ಯಾರ್ಥಿಗಳಿಗೆ ಲೇಖನಿಗಳನ್ನು ವಿತರಿಸಿದರು.