ಬೆಂಗಳೂರು: ದರ್ಶನ್ ಬೆನ್ನು ನೋವು ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದ ಹಿನ್ನೆಲೆ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ದರ್ಶನ್ ಸಮ್ಮತಿ ಸೂಚಿಸಿದ್ದಾರೆ.
ದರ್ಶನ್ ಮತ್ತು ಪತ್ನಿ ವಿಜಯಲಕ್ಷಿ÷್ಮ ಜೊತೆ ಚರ್ಚೆ ನಡೆಸಿರುವ ವೈದ್ಯರು, ಈ ವೇಳೆ ಪಿಜಿಯೋಥೆರಪಿ ಜೊತೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಕೇವಲ ಪಿಜಿಯೋಥೆರಪಿಯಿಂದ ಬೆನ್ನು ನೋವು ಸಂಪೂರ್ಣ ಗುಣಮುಖ ಸಾದ್ಯವಿಲ್ಲ. ದರ್ಶನ್ ಗೆ ಚಿಕಿತ್ಸೆ ನೀಡ್ತಿರುವ ವೈದ್ಯ ಡಾ.ನವೀನ್ ಅಪ್ಪಾಜಿಗೌಡ ತಂಡದಿಂದ ಮನವರಿಕೆ ಮಾಡಿಕೊಡಲಾಗಿದೆ. ಶಸ್ತç ಚಿಕಿತ್ಸೆ ಮೂಲಕವೇ ದರ್ಶನ್ ಉಲ್ಬಣವಾಗಿರವ ಬೆನ್ನು ನೋವಿಗೆ ಪರಿಹಾರ ಎನ್ನಲಾಗಿದ್ದು, ಶೀಘ್ರ ಬೆನ್ನುನೋವಿನ ಸಮಸ್ಯೆಗೆ ಶಸ್ತç ಚಿಕಿತ್ಸೆ ಔಚಿತ್ಯದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡದ ಮನವರಿಕೆ ಬೆನ್ನಲ್ಲೇ ದರ್ಶನ್ ಮತ್ತು ಪತ್ನಿ ವಿಜಯ ಲಕ್ಷಿ÷್ಮÃ ಶಸ್ತ್ರ ಚಿಕಿತ್ಸೆಗೆ ಸಮ್ಮತಿ ನೀಡಲಿದ್ದು, ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಅವರಿಗೆ ಶಸ್ತç ಚಿಕಿತ್ಸೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.