ಬೆಂಗಳೂರು: ಬರಗೂರು ರಾಮಚಂದ್ರಪ್ಪ ರವರ ನಿರ್ದೇಶನದ ಅಂತರ ರಾಷ್ಟ್ರೀಯ ಪ್ರಶಸ್ತಿಗೆ ಮಾನ್ಯತೆ ಪಡೆದಿರುವ ಚಿಣ್ಣರ ಚಂದ್ರ ಚಲನಚಿತ್ರ, ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರ ನಟ ಕುಮಾರ್ ಗೋವಿಂದ್ ಬಿಡುಗಡೆ ಮಾಡಿದರು.
ಚಿತ್ರ ವೀಕ್ಷಿಸಿದ ಪ್ರೇಕ್ಷಕರು, ಅಕ್ಷರ ಜ್ಞಾನದೊಂದಿಗೆ, ಸಾಮಾಜಿಕ ಚಿಂತನೆಯುಳ್ಳ ಈ ಮಕ್ಕಳ ಚಿತ್ರ ಇಂದಿನ ಸಮಾಜಕ್ಕೆ ಅವಶ್ಯ ಎಂದು ಪ್ರೇಕ್ಷಕರ ಮನದಾಳದ ಮಾತಾಗಿತ್ತು, ಈ ಚಿತ್ರದ ಪಾತ್ರದಾರಿಗಳಾದ ಜಿಗಣಿ ರಾಜಶೇಖರ್, ಆಕಾಂಕ್ಷ್ ಬರಗೂರು, ಸುಂದರ್ ರಾಜ್, ಮೈಸೂರು ಮಂಜುಳ ಸೇರಿದಂತೆ ಎಲ್ಲಾ ಹಿರಿಯ – ಕಿರಿಯ ನಟರ ನೈಜ ಅಭಿನಯವಾಗಿತ್ತು, ಇದೇ ತಿಂಗಳು ಚಿಣ್ಣರ ಚಂದ್ರ ಮಂಡ್ಯದಲ್ಲಿ ಪ್ರದರ್ಶನಗೊಳ್ಳಲಿದ್ದು 5 ಸಾವಿರಕ್ಕು ಹೆಚ್ಚಿನ ಪ್ರೇಕ್ಷಕರು ವೀಕ್ಷಿಸಲಿದ್ದಾರೆ.
ಈ ಚಿತ್ರವನ್ನು ಕರ್ನಾಟಕಾದ್ಯಂತ ಶಾಲೆಗಳಲ್ಲಿ ಪ್ರದರ್ಶನ ಮಾಡಲು ಬದಲಾವಣೆಯತ್ತ ಬಳಗದ ಟಿ. ಬಿ.ಅಶೋಕ್ ರವರು ನೇತೃತ್ವ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಂಗೀತ ನಿರ್ದೇಶಕಿ – ಗಾಯಕಿ ಡಾ.ಶಮತ ಮಲನಾಡ್, ಕರ್ನಾಟಕ ಪದವಿ ಪೂರ್ವ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಕರ್ನಾಟಕ ಪ್ರ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಘುಚಂದ್ರ ಹಾಗೂ ತಾರಾನಾಥ್, ಬದವಣೆಯತ್ತ ಬಳಗದ ಅಶೋಕ್, ಪತ್ರಕರ್ತೆ ಶುಭ ವಿಶ್ವಕರ್ಮ, ಡಾ.ಗುರುಮೂರ್ತಿ, ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಪುರಸ್ಕೃತರು, ಆಪ್ತ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು, ಚಿಣ್ಣರ ಚಂದ್ರ ಚಿತ್ರ ನಟ – ನಿರ್ಮಾಪಕರಾದ ಜಿಗಣಿ ರಾಜಶೇಖರ್ ( ಬಿ.ಎನ್.ಗೋವಿದರಾಜ್) ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರ: ಜಿ.ಎಲ್.ಸಂಪಂಗಿ ರಾಮುಲು