ಕೋಲಾರ: ಕರ್ನಾಟಕ ರಾಜ್ಯದಾದ್ಯಂತ ಇಂದಿನಿಂದ ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆಗೆ ವಾರದ ಆರು ದಿನಗಳು ಮೊಟ್ಟೆ ವಿತರಿಸುತ್ತಿರುವುದು ಶ್ಲಾಘನೀಯ ಸಂಗತಿ ಆದರೂ, ಬಿಸಿಯೂಟಕ್ಕೆ ದಿನಸಿ ನೀಡಿದಂತೆ ಶಾಲಾ ಬಾಗಿಲಿಗೆ ಮೊಟ್ಟೆ ವಿತರಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ನಲ್ಲಿಂದು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಟಿ.ವಿ. ತಿಮ್ಮರಾಯಪ್ಪ ರವರನ್ನು ಭೇಟಿ ಮಾಡಿ,ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ದುಬಾರಿಯಾಗಿರುವ ತರಕಾರಿ ಬೆಲೆಗಳು, ಅನಿಲ, ಅಕ್ಷರ ದಾಸೋಹ ಸಾಧಿಲ್ವಾರು ವೆಚ್ಚ ಗಳನ್ನು ಪರಿಷ್ಕರಿಸಿ ನೀಡಲು ಅವರು ಕೋರಿದರು.
ಸರ್ಕಾರ ನಿಗದಿಪಡಿಸುವ ಮೊಟ್ಟೆಯ ದರ ಒಂದಾದರೆ, ಮಾರುಕಟ್ಟೆ ದರ ಒಂದಾಗಿದೆ ಈ ಧೋರಣೆಯನ್ನು ತಪ್ಪಿಸಲು ಸರ್ಕಾರವೇ ಮೊಟ್ಟೆಗಳನ್ನು ಖರೀದಿಸಿ ಶಾಲೆಗೆ ಅಕ್ಕಿ, ಗೋದಿ, ಬೇಳೆ, ಎಣ್ಣೆ,ಹಾಲು ನೀಡಿದಂತೆ ಮೊಟ್ಟೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಕ್ಷರ ದಾಸೋಹ ಅಧಿಕಾರಿ ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಂ. ನಾರಾಯಣಸ್ವಾಮಿ. ಖಜಾಂಚಿ ಕೆ ವಿ ಜಗನ್ನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷರಾದ ಪ್ರೇಮಲತಾ, ಕೋಲಾರ ತಾಲೂಕು ಅಧ್ಯಕ್ಷ ಸಿ ವಿ ನಾಗರಾಜ್, ಮುಳಬಾಗಿಲು ಅಧ್ಯಕ್ಷ ವಾಲಿಬಾಲ್ ಶಿವಣ್ಣ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ನಾರಾಯಣಸ್ವಾಮಿ, ಕಾರ್ಯದರ್ಶಿ ಚಂದ್ರಪ್ಪ, ಜಿಲ್ಲಾ ಮುಖಂಡರಾದ ಮುನಿನಾರಾಯಣಪ್ಪ, ಕೋಟೇಶ್ವರರಾವ್,ಎಲ್.ಶ್ರೀನಿರಾಸ್, ವೆಂಕಟೇಶ ಮೂರ್ತಿ.ಮುರಳಿದರ್, ಚಂದ್ರು, ಸುರೇಶ್ ನಾರಾಯಣಸ್ವಾಮಿ, ಗೋವಿಂದ ಗೌಡ ಆಂಜಿನಮ್ಮ, ಶತಂತಲಮ್ಮ, ಮಹಮದಿ ಜಹರಾ, ಸರೋಜಮ್ಮ ವಿ.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.