ನೆಲಮಂಗಲ: ನಗರದ ಪೇಟೆ ಬೀದಿ ಹಾಗೂ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶಾಸಕ ಎನ್ ಶ್ರೀನಿವಾಸ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎರಡು ಪ್ರಮುಖ ರಸ್ತೆಗಳಾದ ಪೇಟೆ ಬೀದಿ ರಸ್ತೆ ಹಾಗೂ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದ ರಸ್ತೆ ಸುಮಾರು ವರ್ಷಗಳಿಂದ ನೆಲ ಗುದ್ದಿಗೆ ಬಿದ್ದಿತ್ತು ಸಾರ್ವಜನಿಕರಿಗೆ ಉತ್ತಮವಾದ ರಸ್ತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅತಿ ಹೆಚ್ಚು ಜನರು ಓಡಾಡುವ ನಗರದ ಪೇಟೆಬೀದಿ ರಸ್ತೆಗೆ 45ಲಕ್ಷ ಹಾಗೂ ಎಬಿನೇಜರ್ ಶಾಲೆಯಿಂದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದ ರಸ್ತೆವರೆಗೆ 37ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ರಸ್ತೆಯಲ್ಲಿ ಮೇಲು ಸೇತುವೆ ಅನಿವಾರ್ಯ ಇರುವಕಾರಣ ನನ್ನ ವಿಶೇಷ ಅನುದಾನದಲ್ಲಿ ನಿರ್ಮಿಸಲಾ ಗುವುದು. ಹಾಗೂ ಪೇಟೆಬೀದಿಯಲ್ಲಿ ಹೈಟೆಕ್ ಶೌಚಾ
ಲಯ ಮಾಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಆಯುಕ್ತ ಮನು ಕುಮಾರ್ ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ನಗರಸಭೆ ಉಪಾಧ್ಯಕ್ಷೇ ಸುಜಾತ ಮುನಿಯಪ್ಪ, ಸದಸ್ಯರಾದ ಸುನೀಲ್ ಮೂಡ್, ಸದಸ್ಯ ಬಿ.ಜಿ ವಾಸು,ಆನಂದ್, ಗಂಗಾಧರ ಗಣಿ, ಗಣೇಶ್, ರಾಮಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಪಿಳ್ಳಪ್ಪ, ಮುಖಂಡರಾದ ಮೀಲ್ಟಿ ಮೂರ್ತಿ, ವೆಂಕಟೇಶ್, ಲಕ್ಷ್ಮೀಕಾಂತ್, ಹುಚ್ಚಹನುಮೇಗೌಡ, ಪ್ರಮೋದ್ ಪುರುಷೋತ್ತಮ್, ಭಾಗವಹಿಸಿದ್ದರು.