ರಾಣೆಬೆನ್ನೂರು: ಶಾಸಕ ಶ್ರೀ ಪ್ರಕಾಶ್ ಕೋಳಿವಾಡ ಅವರು ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀನಿವಾಸು ಸರಸ್ವತುಲ ಅವರು ರಾಣೆಬೆನ್ನೂರು ತಾಲೂಕಿನಲ್ಲಿ 1 ರಿಂದ 10 ನೇ ತರಗತಿವರೆಗಿನ ಕನ್ನಡ ಪಠ್ಯಕ್ರಮ ಹೊಂದಿರುವ 100 ಡಿಜಿಟಲ್ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಡಿ ಎಲ್ಲಾ ಶಿಕ್ಷಕರಿಗೆ ಡಿಜಿಟಲ್ ಸಾಫ್ಟ್ವೇರ್ ಬಳಕೆಯಲ್ಲಿ ತರಬೇತಿ ನೀಡಲಾಗುವುದು. 41 ಕ್ಲಬ್ಗಳ ಸಂಘವು ತನ್ನ ದೀರ್ಘಾವಧಿಯ ಯೋಜನೆಯಾದ ಫ್ರೀಡಂ ಥ್ರೂ ಡಿಜಿಟಲ್ ಎಜುಕೇಶನ್ ಅಡಿಯಲ್ಲಿ ಆಗಸ್ಟ್ 2024 ರ ಅಂತ್ಯದ ಹೊತ್ತಿಗೆ ದೇಶದಾದ್ಯಂತ 300 ಶಾಲೆಗಳನ್ನು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಕೊಠಡಿಗಳೊಂದಿಗೆ ಸಜ್ಜುಗೊಳಿಸಲಿದೆ. ಇದು 1.50 ಲಕ್ಷ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಶಾಸಕ ಶ್ರೀ ಪ್ರಕಾಶ್ ಕೋಳಿವಾಡ ಅವರು ಮಾತನಾಡಿ, ರಾಣೆಬೆನ್ನೂರಿನಲ್ಲಿ 100 ಶಾಲೆಗಳನ್ನು ಸಜ್ಜುಗೊಳಿಸುವ ಮೂಲಕ, ಯಾವುದೇ ದೊಡ್ಡ ನಗರಕ್ಕೆ ಸಮಾನವಾಗಿ ದೂರದ ಊರುಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪೂರೈಸುವುದು ನನ್ನ ಗುರಿಯಾಗಿದೆ. ನಮ್ಮಲ್ಲಿ ಒಬ್ಬರು ಅಥವಾ ಇಬ್ಬರು ಡಾ.ಕಲಾಮ್ಗಳು ಈ ಶಾಲೆಗಳಿಂದ ಬಂದರೂ, ನಮ್ಮ ಉದ್ದೇಶ ಈಡೇರುತ್ತದೆ. ಡಿಜಿಟಲ್ ಶಿಕ್ಷಣದ ಕ್ಷೇತ್ರದಲ್ಲಿ 41 ಕ್ಲಬ್ಗಳ ಅಸೋಸಿಯೇಷನ್ನ ಕೆಲಸದಿಂದ ನನಗೆ ಸಂತೋಷವಾಗಿದೆ ಎಂದರು.
41 ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಅಸೋಸಿಯೇಶನ್ 41ಎಆರ್ ಶ್ರೀನಿವಾಸ ಸರಸ್ವತುಲ ಅವರು ಮಾತನಾಡಿ, ಫ್ರೀಡಂಥ್ರೂ ಡಿಜಿಟಲ್ ಎಜುಕೇಶನ್ ಎಂಬುದು ನಮ್ಮ ದೀರ್ಘಾವಧಿಯ ಯೋಜನೆಯಾಗಿದ್ದು, ಹಿಂದುಳಿದ ಹಿನ್ನೆಲೆ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೆಟ್ರೋ ನಗರದ ವಿದ್ಯಾರ್ಥಿಗಳಂತೆ ಕಲಿಕಾ ಅವಕಾಶಗಳನ್ನು ಒದಗಿಸುವ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಶಿಕ್ಷಣ ಉಪಕರಣಗಳನ್ನು ಪೂರೈಸುತ್ತದೆ.
ಈ ಯೋಜನೆಯು ಭರವಸೆ ಮತ್ತು ಅವಕಾಶಗಳ ನಡುವಿನ ಸೇತುವೆಯಾಗಿದೆ ಎಂದು ಅವರು ಹೇಳಿದರು. ಹಾವೇರಿ ಜಿಲ್ಲೆಯ 86 ಗ್ರಾಮಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಶಾಲೆಗಳು ಹರಡಿಕೊಂಡಿವೆ.ರಾಣೆಬೆನ್ನೂರು ಜಿಲ್ಲೆಯಲ್ಲಿ ಬೀಜ ತಯಾರಿಕೆಯಲ್ಲಿ ವ್ಯವಹಾರ ಆಸಕ್ತಿ ಹೊಂದಿರುವ ಅಗ್ರಿ ಎಸಿಎಸ್ಇಎನ್ ಕಂ
ಪನಿಯು ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿದೆ.