ಮೈಸೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಇಂದು ಮೈಸೂರು ಬಂದ್ಗೆ ಕರೆ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರ ಲಕ್ಷ್ಮಣ್ ನೇತೃತ್ವದಲ್ಲಿ ಬಂದ್ ನಡೆದಿದ್ದು, ಒಂದು ಹಂತದಲ್ಲಿ ಲಕ್ಷ್ಮಣ್ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಆರ್ಎಸ್ಎಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರ್. ಎಸ್ಎಸ್ ಕಚೇರಿಮುಂದೆ ಬ್ಯಾರೀಕೇಡ್ ಅಳವಡಿಸಿದ್ದ ಪೊಲೀಸರು ಲಕ್ಷ್ಮಣ ಮತ್ತು ಅವರ ಸಹಪಾಟಿಗಳನ್ನು ತಡೆದಿದ್ದಾರೆ.
ಈ ಹಂತದಲ್ಲಿ ಲಕ್ಷ್ಮಣ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಇಂದು ಕರೆ ನೀಡಿರುವ ಬಂದ್ಗೆ ಹೋಟೆಲ್ನವರು ಕಪ್ಪು ಪಟ್ಟಿ ಧರಿಸಿ ತಮ್ಮ ವಹಿವಾಟು ನಡೆಸುವ ಮೂಲಕ ಸಿಬ್ಬಂದಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ.