ಬೆಂಗಳೂರು: ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಲಿ ಕ್ರೈಸ್ಟ್ ಶಾಲೆಯಲ್ಲಿ ಹಿಂದಿ ಶಿಕ್ಷಕರೊಬ್ಬರು ಹತ್ತು ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿರುವ ಘಟನೆ ವರದಿಯಾಗಿದೆ.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ರವರು ತಿಳಿಸಿದ ಪ್ರಕಾರ ಮಕ್ಕಳು ಆಟವಾಡುವ ಅಥವಾ ತಮಾಷೆ ಸಮಯದಲ್ಲಿ ಹಿಂದಿ ಶಿಕ್ಷಕರ ಮೇಲೆ ಬಣ್ಣ ಬಿದ್ದಿದ್ದರಿಂದ ಶಿಕ್ಷಕರು ಕೋಪಗೊಂಡು ಸ್ಕೇಲಿನಲ್ಲಿ ಕೈಗೆ ಹೊಡೆಯುವ
ಬದಲು ಕೆನ್ನೆಗೆ ಹೊಡೆದು ಹಲ್ಲು ಉದಿರಿದೆ ಎಂದು ಮಗುವಿನ ತಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಮಗುವಿನ ತಂದೆ ಅರುಣ್ ಕುಮಾರ್ ಅವರು ನೀಡಿದ ದೂರಿನ ಅನ್ವಯ ಜಯನಗರ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ಆರಂಭಿಸಿರುತ್ತಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.