ದೇವನಹಳ್ಳಿ: ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ತಂಭವಾಗಿದೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಉಪ ತಹಸೀಲ್ದಾರ್ ತಿಳಿಸಿದರು.
ಪಟ್ಟಣದ ಬಿಬಿ ರಸ್ತೆಯ ಕೊರಚರಪಾಳ್ಯ ಸರ್ಕಾರಿ ಪ್ರಾಥಮಿಕ ಪಾಠಶಾಲ ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು ನೂರು ವರ್ಷ ತುಂಬಿದ ಶತಮಾನೋತ್ಸವ ಆಚರಿಸಲು ಹಳೆ ವಿದ್ಯಾರ್ಥಿಗಳು ಮುಂದಿನ ವರ್ಷ 2025 ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್ಆರ್ ರವಿಕುಮಾರ್ ಮಾತನಾಡಿ ಶಿಕ್ಷಕರಿಂದಶಿಕ್ಷಣ ಕಲಿತ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ದಾರಿಯಲ್ಲಿ ನಡೆಯಬೇಕು ಮಾರ್ಗದರ್ಶಕರು ಜೊತೆಗೆ ಜೀವನ ಮೌಲ್ಯ ತುಂಬ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ ಇದೆ ಸಂಸ್ಕೃತಿಯಿಂದ ಶಿಕ್ಷಕರಿಗೆ ಮಹತ್ವ ಸ್ಥಾನ ಕಲ್ಪಿಸಲಾಗಿದೆ ಆ ಕಾರಣದಿಂದ ನಮ್ಮೆಲ್ಲಾ ಹಳೆ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಇಂತಹ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ತಿಳಿಸಿದರು.
ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ ಜಗನ್ನಾಥ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಹಂತದ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. ಹಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅತಿ ವಿಜೃಂಭಣೆಯಿಂದ ಶತಮಾನೋತ್ಸವವನ್ನು ಆಚರಿಸಲು ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ಪುರಸಭಾ ಪೂರ್ವ ಅಧ್ಯಕ್ಷ ನರಸಿಂಹಮೂರ್ತಿ, ಸಮಾಜ ಸೇವಕ ಜಿ ಪುಟ್ಟಣ್ಣ, ಹಳೆ ವಿದ್ಯಾರ್ಥಿಗಳಾದ ಸಿಎಂ ವೆಂಕ್ಟೇಶ್, ಕೃಪಾಕರ್, ಮದನ್ ಗೋಪಾಲ್, ಜೆಸಿಎಂ ಆನಂದ್, ಶಫಿ ಅಹಮದ್, ಕುಮಾರ್,ಹನುಮಂತಪ್ಪ, ಮುತ್ತುರಾಜ್ ವೇಣುಗೋ ಪಾಲ್, ಕುಮಾರ್, ಕೃಷ್ಣಪ್ಪ, ಸುರೇಶ್, ಮತ್ತು ನಿವೃತ್ತ ಮುಖ್ಯ ಶಿಕ್ಷಕ ಶ್ರೀ ರಾಮಯ್ಯ, ಕೊರಚಲಪಾಳ್ಯದೈಹಿಕ ಮತ್ತು ಶಿಕ್ಷಣ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮುಂತಾದವರು ಇದ್ದರು.