ಬಳ್ಳಾರಿ ಕೆ.ಇ.ಬಿ. ವೃತ್ತದಲ್ಲಿರುವ ಗಣೇಶ್ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಮಾಡಿ ಪೊಲಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಮಾರಕಾಸ್ತ್ರ ಸಿನಿಮಾ ಖ್ಯಾತಿಯ ಬಳ್ಳಾರಿಯ ಗುರುಮೂರ್ತಿ ಸುನಾಮಿ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಶಿಖಂಡಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು.
ಶಿಖಂಡಿ ಚಿತ್ರಮೂಲತಃ ಬಳ್ಳಾರಿಯ ಉದ್ಯಮಿ ಪೊಲಾ ಪ್ರವೀಣ್ ಅವರ ಪೊಲಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರುವ ಮೊದಲ ಚಿತ್ರವಾಗಿದೆ.
ಪೊಲಾ ಪ್ರವೀಣ್ ಅವರು ನಿರ್ಮಾಪಕರಾಗಿ ಈ ಚಿತ್ರಕ್ಕೆ ಮೊದಲ ಬಾರಿಗೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಡಿಎಸ್ ಕೆ ಸಿನಿಮಾಸ್ ಖ್ಯಾತಿಯ ಸುನೀಲ್ ಕಂಬಾರ್ ಅವರು ಬಂಡವಾಳ ಹಾಕಿದ್ದಾರೆ.ಮಾರಕಾಸ್ತ್ರ ಸಿನಿಮಾ ಖ್ಯಾತಿಯ ನಿರ್ದೇಶಕ ಬಳ್ಳಾರಿಯ ಗುರುಮೂರ್ತಿ ಸುನಾಮಿ ಅವರ ಕಥೆ ನಿರ್ದೇಶನದಲ್ಲಿ ಶಿಖಂಡಿ ಚಿತ್ರ ಮೂಡಿ ಬರಲಿದ್ದು, ಇವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಎರಡನೇ ಚಿತ್ರವಾಗಿದೆ.
ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಿದ ಮೈಸೂರಿನ ಯುವರಾಜ ಗೌಡ ಅವರು ಮೊದಲ ಬಾರಿಗೆ ಶಿಖಂಡಿ ಚಿತ್ರದ ನಾಯಕ ನಟನಾಗಿ ನಟಿಸಲಿದ್ದಾರೆ. ವಿಶೇಷ ಕಥಾಹಂದರದ ಶಿಖಂಡಿ ಚಿತ್ರದಲ್ಲಿ ನಟ, ನಿರ್ಮಾಪಕ, ತಾಂತ್ರಿಕ ತಂಡ ಸೇರಿದಂತೆ ಬಹುತೇಕ ಬಳ್ಳಾರಿಯ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು ತದನಂತರ ದಿನಗಳಲ್ಲಿ ಸ್ಯಾಂಡಲ್ ವುಡ್ ನ ದೊಡ್ಡ ನಟರು ಸಹ ಚಿತ್ರ ತಂಡಕ್ಕೆ ಸೇರಲಿದ್ದಾರೆ ಎಂದುಗುರುಮೂರ್ತಿ ಹೇಳಿದರು.
ಬಳ್ಳಾರಿ, ಬೆಂಗಳೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.ಈ ಸಂದರ್ಭದಲ್ಲಿ ನಿರ್ಮಾಪಕ ಪೋಲಾ ಪ್ರವೀಣ್, ಸಹ ನಿರ್ಮಾಪಕ ಸುನೀಲ್ ಕಂಬಾರ್, ನಿರ್ದೇಶಕ ಗುರುಮೂರ್ತಿ ಸುನಾಮಿ, ನಟ ಯುವರಾಜ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.