ಬೆಂಗಳೂರು: ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿದ್ದು,ಚನ್ನಪಟ್ಟಣಕ್ಕೆ ಸಿ.ಪಿ ಯೋಗೇಶ್ವರ್ ಹಾಗೂ ಸಂಡೂರಿಗೆ ತುಕಾರಾಂ ಪತ್ನಿ ಅನ್ನಪೂರ್ಣಗೆ ಟಿಕೆಟ್ ನೀಡಿದ್ದು, ಶಿಗ್ಗಾವಿಗೆ ಇನ್ನೂ ಟಿಕೆಟ್ ಘೋಷಣೆಯಾಗದೆ ಬಾಕಿಯುಳಿದಿದೆ.
ಗೊಂದಲದ ಕಾರಣ ಟಿಕೆಟ್ ಇನ್ನು ಘೋಷಣೆಯಾಗಿಲ್ಲ ಎಂದು ಹೇಳಲಾಗಿದೆ.
ಮುಸ್ಲಿಂ ಇಲ್ಲವೇ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕೋ ಎಂಬ ಗೊಂದಲ ಎದುರಾಗಿದ್ದು, ಬಿಜೆಪಿಯಿಂದ ಸಂಸದ ಬಸವರಾಜ್ ಬೊಮ್ಮಾಯಿ ಪುತ್ರನಿಗೆ ಟಿಕೆಟ್ ನೀಡಿರುವ ಕಾರಣ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಇತ್ತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಅಲ್ಪಸಂಖ್ಯಾತ ನಾಯಕರಿಂದ ಒತ್ತಾಯಿಸುತ್ತಿದ್ದು,
ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೆ ಮುಸ್ಲಿಂ ಸಮುದಾಯ ಪಕ್ಷದ ಬೆನ್ನಿಗೆ ನಿಂತಿದೆಕಳೆದ ನಾಲ್ಕೈದು ಚುನಾವಣೆಗಳಲ್ಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿದೆ. ಹಾಗಾಗಿ ಈ ಭಾರಿಯೂ ಟಿಕೆಟ್ ನೀಡುವಂತೆ ಮುಸ್ಲಿಂ ಸಮುದಾಯದ ನಾಯಕರ ಪಟ್ಟುಹಿಡಿದಿರುವ ಕಾರಣ ಇನ್ನೂ ಟಿಕೆಟ್ ಘೋಷಿಸದ ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.