ಶಿಡ್ಲಘಟ್ಟ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಲ್ಲಿ ಮೆರವಣಿಗೆ ಹೊರಟಿರುವ ಕನ್ನಡ ತಾಯಿ ಭುವನೇಶ್ವರಿ ರಥಕ್ಕೆ ತಾಲೂಕು ಆಡಳಿತ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಅದ್ದೂರಿ ಸ್ವಾಗತ ಕೋರಿದವು.ಶಿಡ್ಲಘಟ್ಟ ಪಟ್ಟಣದ ಬಸ್ ನಿಲ್ದಾಣದಿಂದ ಹೊರಟ ಕನ್ನಡ ರಥದ ಮೆರವಣಿಗೆ ಜೊತೆಗೆ ತಾಲೂಕು ತಹಸೀ ಲ್ದಾರ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ವಿವಿಧ ಕನ್ನಡ ಪರ ಸಂಘಟನೆಗಳು ಹೆಜ್ಜೆ ಹಾಕಿದವು.
ಸಂಜೆ ನಗರದ ಕೋಟೆ ವೃತ್ತದಲ್ಲಿ ಕನ್ನಡ ವರನಟ ಡಾ. ರಾಜಕುಮಾರ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರತಿರೂಪವಾಗಿ ಬೆಂಗಳೂರು ಮತ್ತು ಬಾದಾಮಿಯ ಕಲಾವಿದರು ನೆರೆದಿದ್ದ ಅಪಾರ ಜನಸ್ತೋಮವನ್ನು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಮನರಂಜಿಸಿದರು.ತಾಲೂಕಿನ ವಿವಿಧ ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಶಾಲೆ ಮಕ್ಕಳು ಅಮೋಘವಾದ ನೃತ್ಯ ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ತಾಲೂಕು ತಹಸಿಲ್ದಾರ್ ಬಿ. ಎನ್. ಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಎಂ ಶ್ರೀನಿವಾಸ್, ಹಾಗೂ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು. ಹಳ್ಳಿಕಾರ್ ನಾಟಿ ಹಸು ಮತ್ತು ಹೋರಿ ಹಾಕುವ ಮೂಲಕ ಮತ್ತು ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇಶಿಯ ತಳಿ ಜಾನುವಾರಗಳನ್ನು ಸಾಕುವ ಮೂಲಕ ರೈತರು ದೇಶಕ್ಕೆ ಶಕ್ತಿ ತುಂಬಬೇಕೆಂದು ಕರೆ ನೀಡಿದರು.
ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ವ್ಯವಸ್ಥೆಯನ್ನು ತಾಲೂಕು ಖಾಸಗಿ ಶಾಲೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿಸ್ಡಂ ನಾಗರಾಜ್ ವಹಿಸಿದ್ದರು ವೆಂಕಟ್ ಲಕ್ಷ್ಮಯ್ಯ, ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಗಣನೆಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.