ಶಿವರಾಜ್ ಕುಮಾರ್ ಅವರಿಗೆ ಇಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಅವರ ಅಭಿಮಾನಿಗಳು ರಾಜ್ಯದ ಹಲವು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಮೈಸೂರು, ಚಾಮರಾಜಪೇಟೆ, ಬೆಂಗಳೂರು ಇನ್ನೂ ಹಲವು ನಗರಗಳ ದೇವಾಲಯಗಳಲ್ಲಿ ಅಭಿಮಾನಿಗಳು ಪೂಜೆ, ಅನ್ನಸಂತರ್ಪಣೆ ಮತ್ತು ಹೋಮಗಳನ್ನು ಮಾಡಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲೆಂದು ಅಮೆರಿಕಕ್ಕೆ ತೆರಳಿದ್ದು, ಅಲ್ಲಿನ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಿವಣ್ಣ ಚಿಕಿತ್ಸೆ ಪಡೆಯಲಿದ್ದಾರೆ. ಮುಂದಿನ ಅಂದರೆ ಜನವರಿ 26 ರವರೆಗೆ ಶಿವಣ್ಣ ಅಮೆರಿಕದಲ್ಲಿಯೇ ಇರಲಿದ್ದಾರೆ.