ಬೆಂಗಳೂರು: ಶಸ್ತ್ರಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ನಟ ಶಿವರಾಜ್ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಶಿವಣ್ಣ ಅವರ ಪತ್ನಿ ಗೀತಾಶಿವರಾಜ್ಕುಮಾರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಚಿಕಿತ್ಸೆ ನಂತರ ಮಾತನಾಡಿರುವ ಅವರು ಇನ್ನೂ ಮೂರ್ನಾಲ್ಕು ದಿನಗಳೊಳಗಾಗಿ ಮಾತನಾಡಲಿದ್ದಾರೆ.
ಇದೀಗ ಐಸಿಯುನಲ್ಲಿದ್ದಾರೆ ಎಂದು ಹೇಳಿದ್ದಾರೆ.ಅಭಿಮಾನಿಗಳಷ್ಟೇ ವೈದ್ಯರು ಸಹ ದೇವರು ಎಂದು ಹೇಳಿರುವ ಅವರು ದೇವರ ರೀತಿಯಲ್ಲಿ ಶಿವಣ್ಣ ಅವರಿಗೆ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.ಗೀತಾ ಅವರು ಮಾತನಾಡುವವ ವೇಳೆ ಚಿಕಿತ್ಸೆ ನಡೆಸಿದ ವೈದ್ಯ ಡಾ. ಮುರುಗೇಶ್ ಹಾಗೂ ಸೋದರ ಸಚಿವ ಮಧುಬಂಗಾರಪ್ಪ ಹಾಜರಿದ್ದರು