ಕಲಬುರಗಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಯ ವಿಶೇಷ ಪುರಸ್ಕಾರವು ಹಿರಿಯ ಪತ್ರಕರ್ತರಾದ ಶಿವಾನಂದ ತಗಡೂರು ಅವರ `ಕೋವಿಡ್ ಕಥೆ’ ಗಳು ಕೃತಿಗೆ ಲಭಿಸಿದೆ.
ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಮಾಧ್ಯಮ ರಂಗದಲ್ಲಿ ತುಂಬಾ ಪರಿಣಾಮ ಬೀರಿರುವ ಪುಸ್ತಕ ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು ಕೃತಿ ತೀರಾ ಭಿನ್ನವಾಗಿ ಮೂಡಿದೆ.
ಕೋವಿಡ್ ಕಾಲಘಟ್ಟದಲ್ಲಿ ಆಗಿರುವ ಸಾವು- ನೋವು, ವಿಶೇಷವಾಗಿ ಕೋವಿಡ್ನಲ್ಲಿ ಜೀವ ಕಳೆದುಕೊಂಡ ಪತ್ರಕರ್ತರ ಬದುಕಿನ ವಾಸ್ತವ ಸಂಗತಿಗಳ ಕಥೆಗಳನ್ನೊಳಗೊಂಡ ಈ ಕೃತಿ ಪತ್ರಿಕಾ ವಲಯದಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡಿದೆ. ನೊಂದ ಕುಟುಂಬಗಳ ಬದುಕು ಬೀದಿಗೆ ಬೀಳುವ ಹೊತ್ತಿನಲ್ಲಿ ಅವರಿಗೆ ಆರ್ಥಿಕವಾಗಿ ಆಸರೆಯಾಗಿ ನಿಂತ ನೈಜ ಘಟನೆಗಳು ಪುಸ್ತಕದಲ್ಲಿವೆ.
ಕೊರೋನಾ ಸಂದರ್ಭದಲ್ಲಿ ಟಿವಿ ಸಂದರ್ಶನವೊಂದರಲ್ಲಿ ಶಿವಾನಂದ ತಗಡೂರು ಅವರ ಮಾತು ಮತ್ತು ಚಿಕಿತ್ಸೆಯ ಸಲಹೆಗಳನ್ನು ಕೇಳಿದ ಪೆÇಲೀಸ್ ಅಧಿಕಾರಿಯೊಬ್ಬರು ತಮ್ಮ ತಂದೆಯವರನ್ನುಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದರು.ಇಂತಹ ಜನಪರವಾದ ಕೃತಿಗೆ ಅಮ್ಮ ವಿಶೇಷ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಪ್ರತಿ ವರ್ಷವೂ ಮಾಧ್ಯಮದವರು ಬರೆದ ಒಂದು ಪುಸ್ತಕಕ್ಕೆ ವಿಶೇಷ ಪುರಸ್ಕಾರವನ್ನು
ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿಯೇ ಈ ವಿಶೇಷ ಪುರಸ್ಕಾರವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.