ಬೆಳಗಾಂ: ರಾಜ್ಯ ಸರ್ಕಾರದ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಆದಷ್ಟೂ ಶೀಘ್ರ ಅವರ ಖಾತೆಗೆ ವಿಳಂಬವಾಗಿರುವ ಹಣ ಜಮೆಯಾಗಲಿದೆ.ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಸುದ್ದಿವಾಹನಿಯೊಂದರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ತಮಗೆ ಅಪಘಾತವಾಗಿ 40ದಿವಸ ಚಿಕಿತ್ಸೆ ಪಡೆಯುತ್ತಾ ಆಸ್ಪತ್ರೆಯಲ್ಲಿದ್ದ ಕಾರಣ ಫಲಾನುಭವಿಗಳ ಖಾತೆಗೆ ಜಮೆಯಾಗುವುದು ವಿಳಂಬವಾಗಿದೆ. ತಾವು ಆರೋಗ್ಯವಾಗಿದ್ದು, ಅಧಿವೇಶನಕ್ಕೆ ಹಾಜರಾಗಲಿದ್ದೇನೆ. ತಾವು ಬೆಂಗಳೂರಿನಲ್ಲಿಯೇ ಇದ್ದು ಕಚೇರಿಯಲ್ಲೇ ಕಾರ್ಯನಿರ್ವಹಿಸಿದ್ದರೆ ಹಣಕಾಸು ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಯೋಜನೆ ಹಣ ಬಿಡುಗಡೆ ಮಾಡಿಸುತ್ತಿದ್ದೇ, ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತಿದ್ದೆ ಎಂದು ಹೇಳಿದ್ದಾರೆ.ವಿಳಂಬವಾಗಿರುವ ಹಣ ಆದಷ್ಟೂ ಶೀಘ್ರ ಅಂದರೆ ಎಂಟತ್ತು ದಿನಗಳೊಳಗಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.