ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಾಗೂ ನಗರ ಪೊಲೀಸ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಹಾಗೂ ಇತರ ಕಚೇರಿಗಳಲ್ಲಿ “ಶೂನ್ಯ ತ್ಯಾಜ್ಯ ಕಚೇರಿ ” ಪರಿವರ್ತಿಸುವ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ ನಗರ ಪೊಲೀಸ್ ಆಯುಕ್ತಕರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ದಯಾನಂದ್ ಹಾಗೂ ಬಿವಿಎಂಪಿಯ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಮತ್ತು ಪದ್ಮಿನಿ ಬಲರಾಮ್ ಹಾಗೂ ನಿತಿನ್ ಮೋಹನ್ ರವರು ಭಾಗವಹಿಸಿದ್ದಾರೆ.