ಢಾಕಾ: ರೂಪುರ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ 5 ಬಿಲಿಯನ್ ಡಾಲರ್ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ವಿರೋಧಿ ಸಮಿತಿಯು ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ರಷ್ಯಾದ ಸರ್ಕಾರಿ ಸಂಸ್ಥೆಯಾದ ರೊಸಾಟಮ್ ನಿರ್ಮಿಸುತ್ತಿರುವ ರೂಪುರ್ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ಭಾರತೀಯ ಕಂಪನಿಗಳು ತೊಡಗಿಸಿಕೊಂಡಿವೆ. ಮೊದಲ ಬಾಂಗ್ಲಾದೇಶದ ಪರಮಾಣು ವಿದ್ಯುತ್ ಸ್ಥಾವರವನ್ನು ರಾಜಧಾನಿ ಢಾಕಾದಿಂದ ಪಶ್ಚಿಮಕ್ಕೆ 160 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ.
ಹಸೀನಾ ಜೊತೆಗೆ ಅವರ ಮಗ ಸಜೀಬ್ ವಾಝೆದ್ ಜಾಯ್ ಮತ್ತು ಆಕೆಯ ಸೋದರ ಸೊಸೆ ಮತ್ತು ಯುಕೆ ಖಜಾನೆ ಸಚಿವೆ ಟುಲಿಪ್ ಸಿದ್ದಿಕ್ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಿಡಿನ್ಯೂಸ್ ಭಾನುವಾರ ವರದಿ ಮಾಡಿದೆ. ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿ 5 ಬಿಲಿಯನ್ ಡಾಲರ್ ಹಣಲನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಸೀನಾ, ಜಾಯ್ ಮತ್ತು ಟುಲಿಪ್ ಅವರು ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಿಂದ ಮಲೇಷಿಯಾದ ಬ್ಯಾಂಕ್ಗೆ 5 ಬಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿದ ಆರೋಪದ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಆಯೋಗವನ್ನು ಹೈಕೋರ್ಟ್ ಕೇಳಿದ ನಂತರ ಈ ಬೆಳವಣಿಗೆಯಾಗಿದೆ.
ಎಸಿಸಿ ದಾಖಲೆಗಳ ಪ್ರಕಾರ, ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿನ ಭ್ರಷ್ಟಾಚಾರದ ಆರೋಪಗಳನ್ನು ನ್ಯಾಷನಲ್ ಡೆಮಾಕ್ರಟಿಕ್ ಮೂವ್ಮೆಂಟ್ (ಎನ್ಡಿಎಂ) ಅಧ್ಯಕ್ಷ ಬಾಬಿ ಹಜ್ಜಾಜ್ ಅವರು ಬೆಳಕಿಗೆ ತಂದಿದ್ದಾರೆ.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯಿಂದ 16 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಅಲ್ಲಿಂದ ಪಲಾನಯ ಮಾಡಿದ್ದ 77 ವರ್ಷದ ಹಸೀನಾ ಅವರು ಆಗಸ್ಟ್ 5 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಸಹೋದರಿ ರೆಹಾನಾ ಜೊತೆಗಿದ್ದರು. ಜಾಯ್ ಅಮೇರಿಕಾದಲ್ಲಿ ನೆಲೆಸಿದ್ದಾರೆ, ಆಕೆಯ ಸೊಸೆ ಟುಲಿಪ್ ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ.
ಬಾಂಗ್ಲಾದೇಶದಲ್ಲಿನ ನರಮೇಧದ ಅಪರಾಧಗಳಿಗಾಗಿ ಹಸೀನಾ ಸೇರಿದಂತೆ ಹಲವಾರು ಮ್ಯಾಜಿ ಕ್ಯಾಬಿನೆಟ್ ಮಂತ್ರಿಗಳು, ಸಲಹೆಗಾರರು, ಸೇನೆ ಮತ್ತು ನಾಗರಿಕ ಅಧಿಕಾರಿಗಳಿಗೆ ಬಾಂಗ್ಲಾದೇಶ ಮೂಲದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಬಂಧನ ವಾರಂಟ್ಗಳನ್ನು ಹೊರಡಿಸಿದೆ.