ಬೆಂಗಳೂರು: ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದ್ರಾಬಾದ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕುಟುಂಬಸ್ಥರ ಬಳಿ ಶೋಭಿತಾ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಶೋಭಿತಾ ಅವರು ನಿಮ್ಮ ಬಳಿ ಏನಾದ್ರು ಹೇಳಿಕೊಂಡಿದ್ರಾ ಅವರಿಗೆನಾದ್ರು ಸಮಸ್ಯೆ ಇತ್ತಾ..? ಮದುವೆ ನಂತರದ ಜೀವನದ ಬಗ್ಗೆಯೂ ಕುಟುಂಬಸ್ಥರ ಬಳಿ ಮಾಹಿತಿ ಪಡೆಯುತ್ತಿದ್ದಾರೆ.
ಶೋಭಿತಾ ಅವರ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಅವರು ಕೊನೆಯದಾಗಿ ಮಾಡಿರುವ ಕರೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆಕೆ ಕರೆ ಮಾಡಿರುವವರಿಂದಲೂ ಅವರಿಂದಲೂ ಮಾಹಿತಿ ಪಡೆಯಲು ಮುಂದಾಗಿರುವ ಹೈದ್ರಾಬಾದ್ ಪೊಲೀಸರು ಡೆತ್ ನೋಟ್ ಏನಾದ್ರು ಬರೆದಿಟ್ಟಿದ್ದಾರಾ ಎಂದು ಕೂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಶೋಭಿತಾ ಅವರ ಆರೋಗ್ಯ ಸ್ಥಿತಿಗತಿ ಹೇಗಿತ್ತು..? ಹಣ ಕಾಸಿನ ತೊಂದರೆ ಏನಾದ್ರು ಇತ್ತಾ..? ಮದುವೆ ಮುಂಚೆಯ ಶೋಭಿತಾ ಅವರ ಜೀವನ ಹೇಗಿತ್ತು ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.