ಯಲಹಂಕ: ಪ್ರತಿ ಶುಕ್ರವಾರ ಯಲಹಂಕ ಅಟ್ಟೂರು ಭಾಗದ ಚಿಕ್ಕದಿಣ್ಣೆ ಶ್ರೀ ಆದಿಶಕ್ತಿ ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶ್ವಹಿಂದು ಪರಿಷದ್ ವತಿಯಿಂದ “ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮ” ನಡೆಯುತ್ತದೆ. ಭಕ್ತಾದಿಗಳು ಪ್ರತಿ ಶುಕ್ರವಾರ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನವರಾತ್ರಿ ಉತ್ಸವ ಸಮಿತಿ ಹಾಗೂ ಶ್ರೀಆಧಿಶಕ್ತಿ ಅಂಬಾ ಭವಾನಿ ದೇವಸ್ಥಾನ ಟ್ರಸ್ಟ್ ಭಕ್ತಾದಿಗಳಲ್ಲಿ ಕೋರಿದೆ.
ಪ್ರತಿ ಶುಕ್ರವಾರ ನಡೆಯುವ ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮಕ್ಕೆ ಯಲಹಂಕ ಉಪನಗರ 4ನೇ ಹಂತದ ರಾಯಲ್ ಇಂದ್ರಪ್ರಸ್ಥ ಹೋಟೆಲ್ನ ಮಾಲೀಕರಾದ ಶ್ರೀರಾಜೇಶ್ ರವರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ. ಶ್ರೀಆಧಿಶಕ್ತಿ ಅಂಬಾ ಭವಾನಿ ದೇವಸ್ಥಾನದ ಟ್ರಸ್ಟಿಗಳು ದೇವಿಯು ಇವರಿಗೆ ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ಆರೋಗ್ಯ ನೆಮ್ಮದಿ ನೀಡಿ ಕಾಪಾಡಲೆಂದು ಹಾರೈಸಿದ್ದಾರೆ.
ದೇವಸ್ಥಾನದ ಭಕ್ತರಿಗೆ ಯಾವುದೇ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಪಾರ್ಟಿಹಾಲ್ ಅನ್ನು ರಿಯಾಯಿತಿ ದರದಲ್ಲಿ ನೀಡಲಿದ್ದಾರೆ. ಭಕ್ತಾದಿಗಳು ಹಾಗೂ ಸುತ್ತಮುತ್ತಲ ಜನತೆ ಸದುಪಯೋಗ ಪಡೆದುಕೊಳ್ಳ ಬೇಕೆಂದು ಕೋರಲಾಗಿದೆ.