ಬೆಂಗಳೂರು: ಬೆಂಗಳೂರು ನ್ಯೂ ತಿಪ್ಪಸಂದ್ರದಲ್ಲಿರುವ ಗ್ಲೋಬಲ್ ಸಿಟಿ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಹಾಗೂ ಈ ಸಂಸ್ಥೆಯ ಸಂಸ್ಥಾಪಕರು, ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿಯ ಗೌರವ ಅಧ್ಯಕ್ಷರು ಬಲಿಜ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಸಮಾಜ ಸೇವಕ ಆರ್.ಸುರೇಂದ್ರಬಾಬು ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ಫೆಬ್ರವರಿ 16ರಂದು ಕೆ.ಆರ್.ಪುರಂನಲ್ಲಿ ಜರುಗುವ ಶ್ರೀ ಕೃಷ್ಣದೇವರಾಯ 555ನೇ ಜಯಂತೋತ್ಸವ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಬಲಿಜ ಸಮಾಜದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು-ವಕೀಲರು, ವಾಣಿಜ್ಯೋದ್ಯಮಿಗಳು,ಸರ್ಕಾರಿ ನೌಕರರು, ಸಮಾಜ ಸೇವಕರು, ಬಲಿಜ ಸಂಘ ಸಂಸ್ಥೆ ಪದಾಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಪೂರ್ವಬಾವಿ ಸಭೆ ಜರುಗಿತು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿಯ ಅಧ್ಯಕ್ಷ ಕೆ.ಟಿ.ರಾಜಕುಮಾರ್, ಉಪಾಧ್ಯಕ್ಷ ವಿನಯ್ ಕನಕನಾಲ್, ಬಲಿಜ ವಕೀಲರ ವೇದಿಕೆಯ ಅಧ್ಯಕ್ಷ ಪ್ರಕಾಶ್ರಾಮಯ್ಯ ಬಲಿಜ ಪ್ರಗತಿಪರ ಚಿಂತಕ ಸಮಾಜಸೇವಾರತ್ನ ಪ್ರಶಸ್ತಿ ಪುರಸ್ಕøತ ಬಸವನಗುಡಿ ಡಾ.ತ್ಯಾಗರಾಜು, ಕ್ಯಾನ್ಸರ್ ರೋಗತಜ್ಞ ಡಾ.ಕೆ.ಪಿ.ಶಿವಪ್ಪ, ವಕೀಲರಾದ ದೇವಪ್ರಕಾಶ್, ಕೇಂದ್ರ ಬಲಿಜ ಸಂಘದ ನಿರ್ದೇಶಕ ಟಿ.ಎನ್.ಲಕ್ಷ್ಮಣ್, ದೀಕ್ಷಿತ್, ಧನಶೇಖರ್, ಅಮೃತಾರಾಜಕುಮಾರ್, ಡಿಡಿ ಚಂದನ ವಾಹಿನಿಯ ವಾರ್ತ ವಾಚಕಿ ಬಲಿಜ ಕಣ್ಮಣಿ ಹೆಚ್.ಪಿ.ಸೌಮ್ಯ, ಸೇರಿದಂತೆ ಅನೇಕ ಗಣ್ಯರಿದ್ದರು. ಚಿತ್ರ: ಜಿ.ಎಲ್.ಸಂಪಂಗಿರಾಮುಲು