ಮೇಲುಕೋಟೆ: ಶ್ರೀಚೆಲುವನಾರಾಯಣಸ್ವಾಮಿವರ ಬನ್ನಿ ಪೂಜಾಕಾರ್ಯಕ್ರಮ ಶನಿವಾರ ತಡರಾತ್ರಿ ನೆರವೇರಿತು ರಾತ್ರಿ 12ಕ್ಕೆ ಕತ್ತಲೆಯಲ್ಲೇ ನಡೆದ ವಿಯದಶಮಿ ವಿಜಯೋತ್ಸವ ರಾತ್ರಿ 12-30ರವರೆಗೆ ನೆರವೇರಿತು.
ಬನ್ನಿ ಮಂಟಪದ ಬಳಿ ಲೋಕ ಕಲ್ಯಾಣಾರ್ಥವಾಗಿ ದಶದಿಕ್ಕುಗಳಿಗೆ ಬಾಣಪ್ರಯೋಗಮಾಡಿ ದಲಿತ ಭಕ್ತರಿಗೆ ಮರ್ಯಾಧೆಮಾಡಿದ ನಂತರ ಸ್ವಾಮಿಯ ವಿಜಯೋತ್ಸವ ಮೆರವಣಿಗೆ ಮೇಲುಕೋಟೆಯತ್ತ ಸಾಗಿತು. ಅಂಗಡಿಬೀದಿ ವೃತ್ತದಲ್ಲಿ ಕಲ್ಯಾಣನಾಯಕಿ ಅಮ್ಮನವರ ಶೇಷವಾಹನೋತ್ಸವ ಎದರುಗೊಂಡ ನಂತರ ನಾಲ್ಕೂಬೀದಿಗಳಲ್ಲಿ ಉತ್ಸವ ನೆರವೇರಿತು.
ಅತ್ಯಂತ ಅದ್ವಾನವಾಗಿ ನಿರ್ಲಕ್ಷ್ಯದಿಂದ ನಡೆದ ಕುದುರೆವಾಹನೋತ್ಸವದಲ್ಲಿ ಬೆರಳೆಣಿಕೆ ಯಲ್ಲಿ ಭಕ್ತರು ಭಾಗವಹಿಸಿದದ್ದರು. ಒಂದೆಡೆ ಚೆಲುವನಾರಾಯಣನಿಗೆ ಆಕರ್ಷಕ ಪುಷ್ಪಹಾರವಿಲ್ಲದೆ ಜನರೇಟರ್ ದೀಪದ ವ್ಯವಸ್ಥೆಯಿಲ್ಲದೆ ಉತ್ಸವ ನಡೆದರೆ ಬನ್ನಿಪೂಜೆ ಮಾಡುವ ವೇಳೆ ಬನ್ನಿ ಮಂಪದ ಬಳಿ ಯಾವುದೇ ಬೆಳಕಿನ ವ್ಯವಸ್ಥೆಮಾಡದಕಾರಣ ಪರದಾಡಿದ ದೇಗುಲದ ಸಿಬ್ಬಂದಿ ಭಕ್ತರು ತಂದಿದ್ದ ಕಾರಿನ ಹೆಡ್ ಲೈಟ್ ಹಾಕಿಸಿಕೊಂಡು ಹೀನಾಯಸ್ಥಿತಿಯಲ್ಲಿ ಶಮಿಪೂಜೆ ಮಾಡಿದರು.
ದೇವಾಲಯದ ಬಾಗಿಲಿಗೆ ವಿಜಯದಶಮಿ ಯಂದು ಕನಿಷ್ಠ ಮಾವಿನತೋರಣ ಕಟ್ಟುವ ಕಾರ್ಯವನ್ನೂ ಸಹ ಮಾಡಿರಲಿಲ್ಲ.
ಆದರೆ ದಲಿತ ಭಕ್ತರು ಬನ್ನೀಮಂಟಪಕ್ಕೆ ಮಾವಿನತೋರಣಕಟ್ಟಿ ಸಲ್ವಮಟ್ಟಿಗೆ ಸ್ವಚ್ಚಮಾಡಿದ್ದು ಕಂಡು ಬಂತು. ಸ್ವಾಮಿಯ ವಿಜಯೋತ್ಸವ ಸಂದಿಸಿದ ಅಂಗಡಿ ಬೀದಿ ವೃತ್ತ, ರಾಜಬೀದಿಗೂ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರದೆ ಬೀದಿ ದೀಪಗಳಲ್ಲೇ ಉತ್ಸವದರ್ಶನ ಮಾಡುವಂತಾಗಿತ್ತು. ಇಡೀ ಉತ್ಸವ ಕತ್ತಲೆಯಲ್ಲೇ ನಡೆದ್ದು ಮಾತ್ರ ವಿಷರ್ಯಾಸವಾಗಿದ್ದು ಭಕ್ತರ ಭಾವನೆಗೆ ಧಕ್ಕೆ ತರುವಂತಿತ್ತು.
ಚೆಲವನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರಮುಖ ಉತ್ಸಗಳನ್ನು ಆಕರ್ಷಕವಾಗಿ ಮಾಡಬೇ ಕಾದ ದೇವಾಲಯದ ಆಡಳಿತ ಉತ್ಸವಕ್ಕೆ ಬಜೆಟ್ ಇಲ್ಲ ಎಂಬ ನೆಪ ನೀಡಿ ಯಾವುದೇ ವ್ಯವಸ್ಥೆ ಮಾಡದ ಕಾರಣ ಇಂತಹ ಅವ್ಯವಸ್ಥೆಗಳು ಮರುಕಳಿಸುತ್ತಲೇ ಇವೆ ಮುಂಬರುವ ರಾಜಮುಡಿ ಬ್ರಹ್ಮೋತ್ಸವಕ್ಕಾದರೂ ದೇವಾಲಯದ ಆಡಳಿತ ಸೂಕ್ತವ್ಯವಸ್ಥೆ ಮಾಡಲಿ ಎಂದು ನಾಗರೀಕರು ಒತ್ತಾಯಿಸಿದ್ದಾರೆ.