ಯಲಹಂಕ: ಬೆಂಗಳೂರು ಉತ್ತರ ತಾಲೂಕು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನೆಲೆಯಾಗಿರುವ ಶ್ರೀದೇವಿ ಭೂದೇವಿ ಸಮೇತರಂಗನಾಥ ಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ತಿರುಕಲ್ಯಾಣೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.ಲೋಕಕಲ್ಯಾಣಕ್ಕಾಗಿ ನಡೆದ ಈ ಕಲ್ಯಾಣೋತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಭಗವಂತನ ಆಶೀರ್ವಾದ ಪಡೆದು ಪುನೀತರಾದರು.
ವಿಶೇಷವೆಂದರೆ ತಿರುಪತಿ ಯಿಂದ ಲಡ್ಡು ಪ್ರಸಾದವನ್ನು ತರಿಸಿ ಭಕ್ತಾದಿಗಳಿಗೆ ವಿತರಿಸಲಾಯಿತು.ನಿನ್ನೆ ಬೆಳಗ್ಗೆಯಿಂದಲೇ ದೇವರಿಗೆ ಸುಪ್ರಭಾತಸೇವೆ, ತುಳಸಿ ಪೂಜೆ, ಅಗ್ನಿಮುಕಗಣಪತಿ ಹೋಮ, ಕುಂಭಾಭಿಷೇಕ, ಕಲ್ಯಾಣೋತ್ಸವ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ಜೊತೆಗೆ ವಿಶೇಷ ಪುಷ್ಪಾಲಂಕಾರಗಳು ಜರುಗಿದವು.ಈ ವೇಳೆ ಮಾತನಾಡಿದ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಖ್ಯಾತ ವಕೀಲರು ಆಗಿರುವ ಲಕ್ಷ್ಮಣ್ ಮೂರ್ತಿರವರು ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವದ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಕಂರ್ಯಗಳು ನಡೆದಿದ್ದು ಲೋಕ ಕಲ್ಯಾಣಕ್ಕಾಗಿ ತಿರು ಕಲ್ಯಾಣೋತ್ಸವವನ್ನು ನಡೆಸಲಾಗಿದೆ ಈ ಅದ್ದೂರಿ ಕಾರ್ಯಕ್ರಮಕ್ಕೆ ದೇವಾಲಯದ ಅರ್ಚಕರು, ಅಭಿವೃದ್ಧಿ ಸಮಿತಿಯ ಸದಸ್ಯರು, ಊರಿನಗ್ರಾಮಸ್ಥರು, ದಾನಿಗಳು, ಹೆಚ್ಚಿನ ಸಹಕಾರವನ್ನು ನೀಡಿದ್ದುಎಲ್ಲರಿಗೂ ಧನ್ಯವಾದಗಳು ನನ್ನಅರ್ಪಿಸುತ್ತೇನೆ ಭಗವಂತ ಸಕಲ ಜೀವ ರಾಶಿಗಳನ್ನು ಮನುಕುಲವನ್ನು ಸಮೃದ್ಧಿಯಿಂದ ನಡೆಸಲಿ ಸರ್ವರಿಗೂ ಸನ್ಮಂಗಳ ಉಂಟಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.