ಬೆಂಗಳೂರು: ಶ್ರೀ ಸಾಯಿ ಇಂಟರ್ ನ್ಯಾಷನಲ್ ನೃತ್ಯಶಾಲೆವತಿಯಿಂದ ಭರತ ನಾಟ್ಯ ಕಲಾವಿದೆ ಕುಮಾರಿ ಶ್ರೀ ನಿಧಿ ಹೆಗಡೆ ಅವರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣ ದೇವರಾಯ ಸಭಾಂಗಣದಲ್ಲಿ ನಡೆಯಿತು.
ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಸುನಂದ ದೇವಿ, ಕಲಾವಿದೆ ಪ್ರಸಾದೆ,ಸಂಸ್ಕೃತ ವಿಶ್ವವಿದ್ಯಾಲಯದ ಡಾ.ವಿನಯ್ .ಪಿ. ಮುಖ್ಯ ಅತಿಥಿಗಳಾಗಿ ಸಾಕ್ಷಿಯಾದರು.ಶ್ರೀ ನಿಧಿ ಹೆಗಡೆ ವಿವಿಧ, ರಾಗ ತಾಳಗಳಿಗೆ ವಿವಿಧ ಕಥಾ ಪ್ರಸಂಗಗಳಿಗೆ ಹೆಜ್ಜೆ ಹಾಕಿ ನೋಡುಗರ ಮನಸೆಳೆದು ಚಪ್ಪಾಳೆ ಗಿಟ್ಟಿಸಿಕೊಂಡರು,
ಡಾ.ಮಧುರ ಹೆಗಡೆ, ಗಂಗಾಧರ ಹೆಗಡೆ ಅವರ ಪುತ್ರಿಯಾದ ಶ್ರೀ ನಿಧಿ ಹೆಗಡೆ ಮೈಸೂರು ದಸರಾ,ನಂದಿಬೆಟ್ಟದ ಶಿವರಾತ್ರಿ ಮಹೋತ್ಸವ, ಮಹಾ ಕೃಷ್ಣ ಬ್ರಹ್ಮೋತ್ಸವ ಸೇರಿ ವಿವಿಧ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭರತ ನಾಟ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ನಾಟ್ಯ ಕಲಾರತ್ನ ಸೇರಿದಂತೆ ವಿವಿಧ ಪ್ರಶಸ್ತಿ ಪಡೆದುಕೊಂಡಿದ್ದಾರೆ.