ಬೆಂಗಳೂರು: ಆಧುನಿಕತೆಯ ಪ್ರಭಾವದಿಂದ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ, ಮೂಲ ಜಾನಪದ ಕಲಾ ಪ್ರಕಾರಗಳು ನಶಿಸುವ ಪರಿಸ್ಥಿತಿ ಉಂಟಾಗಿರುವುದು ಆತಂಕಕಾರಿ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರ. ನರಸಿಂಹಮೂರ್ತಿ ಕಳವಳ ವ್ಯಕ್ತಪಡಿಸಿದರು,
ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಭಾಂಗಣದಲ್ಲಿ ಶ್ರೀ ಮಂಠೇಸ್ವಾಮಿ ಜಾನಪದ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ವರ್ಷದ ಜಾನಪದ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಾನಪದ ಕಲಾವಿದರರಿಗೆ ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಇಂದು ನಾವೆಲ್ಲರೂ ಕಂಪ್ಯೂಟರ್, ಮೊ ಬೈಲ್ ಮುಂತಾದವುಗಳ ಪ್ರಭಾವಕ್ಕೆ ಒಳಗಾಗಿ ಜಾನಪದ ಸಂಸ್ಕೃತಿಯನ್ನು ಮೂಲೆಗುಂಪು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮತ್ತೆ ಜಾನಪದ ಸಂಸ್ಕೃತಿಯನ್ನು ಮರುಕಳಿಸಲು ಇಂತಹ ಸಂಘ ಸಂಸ್ಥೆಗಳ, ವೇದಿಕೆಯ ಮೂಲಕ ಪ್ರಸ್ತುತ ಪಡಿಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ಆಧುನಿಕ ಸಂಸ್ಕೃತಿ ಹೆಸರಿನಿಂದ ನಮ್ಮ ಮಾತೃಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಗೆ @ಹಾನಿಯಾಗುತ್ತಿದ್ದರೆ, ಮತ್ತೊಂದು ಕಡೆಗಳಲ್ಲಿ ಪುರಾತನ ಹಾಗೂ ಐತಿಹಾಸಿಕ ನೆಲೆಯುಳ್ಳ ಜಾನಪದ ಸಂಸ್ಕೃತಿಯ ಸೊಗಡು ವಿನಾಶದ ಅಂಚಿನಲ್ಲಿದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು, ಯವಜನಾಂಗ, ವಿದ್ಯಾರ್ಥಿಗಳು ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಲು ಪ್ರಯತ್ನಿಸಬೇಕಾಗಿದೆ ಎಂದರು.
ಜಾನಪದ ಅಕಾಡೆಮಿ ಸದಸ್ಯ ಹುಲಿ ಕುಂಟೆ ಮೂರ್ತಿ ಮಾತನಾಡಿ, ಜನಪದ ಕಲಾವಿದರಲ್ಲಿ ಮಾತಿಗಿಂತ ಮೊದಲು ಸಂಗೀತವಿದೆ. ಬುಡಕಟ್ಟುಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಜುಂಜಪ್ಪನ ಕಾವ್ಯ, ಮೈಲಾರಲಿಂಗ, ಮಂಟೇಸ್ವಾಮಿ, ಮಲೆ ಮಹದೇವಪ್ಪನ ಕಾವ್ಯಗಳಿಗೆ ಜನಪದ ಸಂಸ್ಕೃತಿ ಯಲ್ಲಿ ಉತ್ತಮ ಸ್ಥಾನವಿದೆ. ಜಾನಪದ ಸಂಸ್ಕೃತಿಯಿಂದ ಮಾನವ ಸಂಬಂಧದ ಮಹತ್ವದ ಬಗ್ಗೆ ಅರಿವು ಮೂಡುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಉದಯಿಸಿದ ಜಾನಪದ ಸಂಸ್ಕೃತಿಯ ಪ್ರಕಾರಗಳು ವಿಭಿನ್ನವಾದದ್ದು, ತಾಯಿ,ಮಗ, ಅಣ್ಣ ತಂಗಿ ಮುಂತಾದ ವಾತ್ಸಲ್ಯದ ಸಂಬಂಧಗಳು ಜಾನಪದ ಸಂಸ್ಕೃತಿಯಿಂದ ಹುಟ್ಟಿಕೊಂಡಿದೆ ಎಂದರು.ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ ಗ್ರಾಮೀಣ ಭಾಗದ ರೈತರು ನಿತ್ಯ ಉಪಯೋಗಕ್ಕಾಗಿ ಬಳಸುವ ಬೀಸುಕಲ್ಲು, ಉರುಳುಕಲ್ಲು ಮುಂತಾದವು ಜಾನಪದ ಪರಿಕರಗಳಾಗಿದ್ದವು, ಆದರೆ ಇಂದು ಒಂದು ಕಡೆಯಲ್ಲಿ ಆಧುನಿಕ ಸಂಸ್ಕೃತಿ ಹೆಸರಿನಿಂದ ನಮ್ಮ ಮಾತೃಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಹಾನಿಯಾಗುತ್ತಿದ್ದರೆ, ಮತ್ತೊಂದು ಕಡೆಗಳಲ್ಲಿ ಪುರಾತನ ಹಾಗೂ ಐತಿಹಾಸಿಕ ನೆಲೆಯುಳ್ಳ ಜಾನಪದ ಸಂಸ್ಕೃತಿಯ ಸೊಗಡು ವಿನಾಶದ ಅಂಚಿನಲ್ಲಿದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು, ಯವಜನಾಂಗ, ವಿದ್ಯಾರ್ಥಿಗಳು ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಲು ಪ್ರಯತ್ನಿಸಬೇಕಾಗಿದೆ, ಈ ದಿಸೆಯಲ್ಲಿ ನಾವೆಲ್ಲರೂ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ಮುಂತಾದ ಪ್ರಕಾರಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಮಟೆ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕಂಸಾಳೆ ಕುಣಿತ, ಗಾರುಡಿ ಗೊಂಬೆ, ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ಪುಟಾಣಿ ಪೋರ ಮೋಹಿತ್ ಪುಜಾ ಕುಣಿತದ ಮೂಲಕ ಗಮನ ಸೆಳೆದರು.
ಮುಖ್ಯ ಅತಿಥಿಗಳಾಗಿ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫಿಲೋಷಿಪ್ ಪುರಸ್ಕೃತ ಶ್ರೀನಿವಾಸ್ ಮೂರ್ತಿ, ಭೂಮಿ ಪುತ್ರ ರಾಜೇಗೌಡ, ತಮಟೆ ಕಲಾವಿದ ನಾಗರಾಜು, ಜಾನಪದ ಗಾಯಕ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.ಅಂತರರಾಷ್ಟ್ರೀಯ ಜಾನಪದ ಗಾಯಕರಾದ ಸಂತವಾಣಿ ಸುಧಾಕರ್, ಏಕತಾರಿ ರಾಮಯ್ಯ, ಹೆಸರಾಂತ ಗಾಯಕ ನಾಗೇಂದ್ರ, ಚಕ್ಕೆರೆ ಲೋಕೇಶ್, ಕೆ ಎಂ. ಸುರೇಶ್, ಆರ್ ಕೆ ಸ್ವಾಮಿ , ಹೆಚ್. ಪ್ರದೀಪ, ಮುನಿರಾಜು, ಕು. ಯಶಸ್ವಿನಿ ನಂದನ್, ತಾಸ್ಮಿಯಾ, ಶ್ವೇತಾ ಮತ್ತಿತರರು ಜಾನಪದ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ರಾಮಣ್ಣ ಮತ್ತು ತಂಡದವರು ವಾದ್ಯ ಸಹಕಾರ ನೀಡಿದರು. ವೇದಿಕೆಯಲ್ಲಿ ಶ್ರೀ ಮಂಠೇಸ್ವಾಮಿ ಜಾನಪದ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಯಶೋಧ ಮತ್ತಿತರರು ಉಪಸ್ಥಿತರಿದ್ದರು. ಮಹೇಶ ಮೌರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥಾಪಕ ಕಾರ್ಯದರ್ಶಿ ಎಂ. ಮರಿದೇವರು ವಂದಿಸಿದರು.