ನೆಲಮಂಗಲ: ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನ ಓದಿಸುವವರ ಬಡವರ ಬದುಕು ಹಾಗೂ ಬವಣೆಗಳು ಏನೆಂಬುದು ನನಗೂ ಗೊತ್ತಿದೆ, ನಾನು ಓದುವಾಗ ಇಂತಹ ಸವಾಲುಗಳನ್ನು ಸಾಕಷ್ಟು ಸ್ವೀಕರಿಸಿದ್ದೇನೆ, ಶ್ರೀಮಂತಿಕೆ ಮುಖ್ಯವಲ್ಲ ತನ್ನ ಅಭಿವೃದ್ಧಿಯ ಜೊತೆಗೆ ಬೇರೆಯವರ ಅಭಿವೃದ್ಧಿ ಕಾಣುವ ಮನಸ್ಸು ಮುಖ್ಯ ಎಂದು ಟೆಲಿಕಾಮ್ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ನರಸಿಂಹಮೂರ್ತಿ ತಿಳಿಸಿದರು.
ನಗರದ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಟೆಲಿಕಾಮ್ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಈ ಮಟ್ಟಕ್ಕೆ ಬೆಳೆದಿದ್ದೇನೆ,
ನನಗೆ ಹಲವು ಪ್ರಶಸ್ತಿಗಳು ಲಭಿಸಿದ್ರು ಹೆಚ್ಚಿನ ಸಂತೋಷ ಕೊಟ್ಟಿರಲಿಲ್ಲ ಆದರೆ ನಮ್ಮ ಟ್ರಸ್ಟ್ ಮೂಲಕ ಮಕ್ಕಳಿಗೆ ನೀಡಿದ ಸಮವಸ್ತ್ರಗಳನ್ನು ಧರಿಸಿದ ಮಕ್ಕಳನ್ನ ನೋಡಿ ಊಹಿಸಲಾರದಷ್ಟು ಸಂತೋಷವಾಗಿದೆ, ಆ ಮಕ್ಕಳ ಖುಷಿಯಲ್ಲಿ ಕೋಟಿ ಕೋಟಿ ಸಂಪಾದಿಸಿದಷ್ಟು ತೃಪ್ತಿ ನನಗಿದೆ. ಹಾಗಾಗಿ ನಮ್ಮ ಟ್ರಸ್ಟ್ ಮೂಲಕ ಇಂತಹ ಕಾರ್ಯಕ್ಕೆ ಮುಂದಾಗಿರುವುದು ನನಗೆ ಸಂತಸ ತಂದಿದೆ ಎಂದರು.
ಬೆಸ್ಟ್ ಬಿಸಿನೆಸ್ ಮ್ಯಾನ್ ಮತ್ತು ಸಮಾಜ ಸೇವೆ ಗುರುತಿಸಿ ಮಲೇಶಿಯಾದಲ್ಲಿ ಐಕಾನ್ ಅವಾರ್ಡ್ ಪಡೆದ ಉದ್ಯಮಿ ಹಾಗೂ ಸಮಾಜಸೇವಕ ಜೊತೆಗೆ ಟೆಲಿಕಾಮ್ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ನರಸಿಂಹಮೂರ್ತಿಯವರ ನೇತೃತ್ವದಲ್ಲಿ ಸುಮಾರು 250ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ನೋಟ್ ಬುಕ್ ಗಳ ವಿತರಣೆ ಜೊತೆಗೆ ವೇದಿಕೆ ಮೇಲೆ ಅಧ್ಯಕ್ಷರೊಂದಿಗೆ ಮಕ್ಕಳ ನೃತ್ಯ ಇನ್ನಷ್ಟು ಮನೋಹರವಾಗಿ ಕಂಡು ಬಂದಿದ್ದು ವಿಶೇಷವಾಗಿತ್ತು.
ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆಯ ಚೀಪ್ ಎಡಿಟರ್ ಮಲ್ಲಿಕಾರ್ಜುನ್, ಟೆಲಿಕಾಮ್ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ನ ನಿರ್ದೇಶಕ ಸತ್ಯಮೂರ್ತಿ, ಉಪಾಧ್ಯಕ್ಷೆ ಮಲ್ಲಿಕಾ, ಶ್ರೀ ಬಾಲಾಜಿ ಮಧುಸೂದನ್ ಎಸ್ ಆರ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ವೀರಶೈವ ಮಹಾಸಭಾ ಅಧ್ಯಕ್ಷ ರಾಜಶೇಖರ್, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ. ಸೋನಿಯಾ, ವೈದ್ಯಾಧಿಕಾರಿ ಡಾ. ನಿರ್ಮಲ, ವಾಜರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಂಜುಳಾ, ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಗಂಗಬೈಲಪ್ಪ, ಸಹಶಿಕ್ಷಕಿ ಎಂ ಎಸ್ ರತ್ನಮ್ಮ, ಸೇರಿದಂತೆ ಇನ್ನಿತರ ಸಹ ಶಿಕ್ಷಕರುಗಳು Sಆಒಅ ಅಧ್ಯಕ್ಷರು ಹಾಗೂ ಸದಸ್ಯರುಗಳು ಜೊತೆಗೆ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.