ನೆಲಮಂಗಲ: ನಗರದ ಹೃದಯ ಭಾಗದಲ್ಲಿ ಅನಾದಿಕಾಲ ದಿಂದಲೂ ಪುರ ಪ್ರವೇಶಿತ ಸ್ಥಳದಲ್ಲಿ ನೆಲೆಸಿರುವ ಮತ್ತು ಅಪಾರ ಭಕ್ತ ಸಮೂಹವನ್ನು ಹೊಂದಿರುವ ನೆಲಮಂಗಲ ಗ್ರಾಮದ ಶಕ್ತಿದೇವತೆಯಾದ `ಶ್ರೀ ಮರಿಯಕ್ಕನ ಗುಡಿ’ಯನ್ನು ಇತ್ತೀಚೆಗೆ ನೂತನವಾಗಿ ಮತ್ತು ವಿಶಿಷ್ಟವಾಗಿ ಜೀರ್ಣೋದ್ಧಾರಗೊಳಿಸಲಾಗಿತ್ತು.
ಕಳೆದ ಮೇ.15ರಿಂದ ಮೇ.17ರವರೆಗೆ ಪ್ರಾಣಪ್ರತಿಷ್ಠೆ ಕುಂಬಾಭಿಷೇಕದ ಅಂಗವಾಗಿ ವಿಶೇಷವಾದ ಪೂಜಾಧಿಕಾರ್ಯಗಳು ಹೋಮ ಹವನಾಧಿಗಳು ನಡೆದಿದ್ದವು.
ಇದರಡಿಯಲ್ಲಿ ಅಂದಿನಿಂದಲೂ ನಿರಂತರ 48 ದಿವಸಗಳ ಪೂಜಾ ಕೈಂಕರ್ಯಗಳು ಸಾಂಗೋಪಾಂಗವಾಗಿ ದಿನಂಪ್ರತಿಯೂ ನಡೆದಿದ್ದು ಭಕ್ತಸಮೂಹವನ್ನು ಆಕರ್ಷಿಸಲಾಗಿತ್ತು. ಆದರೆ 48ನೇ ದಿನ ವಿಶೇಷದ ಮಹಾಮಂಡಲ ಪೂಜಾಧಿ ಕಾರ್ಯಗಳು, ಹೋಮ ಹವನಾಧಿಗಳನ್ನು ಜು.4ರ ಗುರುವಾರ ಹಾಗೂ 5ರ ಶುಕ್ರವಾರದಂದು ವ್ಯವಸ್ಥಿತವಾಗಿ ನೆರವೇರಿಸಲಾಯಿತು.
ಶ್ರೀಮರಿಯಕ್ಕ ದೇವರಿಗೂ ಮತ್ತು ದೇಗುಲಕ್ಕೂ ವಿಶೇಷ ಹೂವು ಮತ್ತು ಫಲಪುಷ್ಪಗಳಿಂದ ವಿದ್ಯುತ್ ಸಾಲುದೀಪಗಳನ್ನು ಅಲಂಕಾರಗೊಳಿಸುವ ಮೂಲಕ ವಿಶೇಷವಾಗಿ ಸಹಸ್ರಾರು ಭಕ್ತ ಸಮುದಾಯಕ್ಕೆ ಅನ್ನಸಂತರ್ಪಣೆಯನ್ನು ನೆರವೇರಿಸುವ ಮೂಲಕ ನಡೆಸಲಾಯಿತು.ಶುಕ್ರವಾರದಂದು ತಂಡೋಪತಂಡ ವಾಗಿ ದೇಗುಲದತ್ತ ಧಾವಿಸಿದ ಭಕ್ತರುಗಳು ಇಲ್ಲಿ ನಡೆದ ಹೋಮಾಧಿಗಳು, ಪೂರ್ಣಾಹುತಿ ಮಂಗಳಾರತಿ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆಯಲ್ಲಿ ಸಾವಿರಾರು ಆಸ್ತಿಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.