ಬೆಂಗಳೂರು: ಶ್ರೀ ಅಯ್ಯಪ್ಪ ಧರ್ಮಾಚಾರ ಸೇವಾಶ್ರಮ (ರಿ.) ವತಿಯಿಂದ ನಗರದ ಚಾಮರಾಜಪೇಟೆಯಲ್ಲಿ ದಿ.26 ಡಿಸೆಂಬರ್ 2024 ರಂದು ಮಂಡಲೋತ್ಸವದ ಸಂದರ್ಭದಲ್ಲಿ ಈ ಕೆಳಗೆ ತಿಳಿಸಿದ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಬೆ. 5.00ಗೆ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ. ಬೆ. 10:00ಗೆ: ಅಯ್ಯಪ್ಪ ಲಕ್ಷಾರ್ಚನೆ, ಮ. 1:00ಗೆ ಮಹಾ ಮಂಗಳಾರತಿ ನಂತರ ಎಲ್ಲಾ ಭಕ್ತರಿಗೆ ಪ್ರಸಾದ ವಿನಿಯೋಗ.ವಿಶೇಷ ಸೂಚನೆ: ಮಾಲೆ ಧರಿಸಿದ ಸ್ವಾಮಿಗಳು ಲಕ್ಷಾರ್ಚನೆಗೆ ಕುಳಿತುಕೊಳ್ಳಬಹುದು ಮತ್ತು ಯಾವುದೇ ನೋಂದಣಿ ಇಲ್ಲದೆ ಪೂಜೆಯ ಭಾಗವಾಗಬಹುದು.
ಸಂಜೆ 6:00ಗೆ ವಿಲ್ಲಕ್ಕು ಪೂಜೆ ಆರಂಭ, ಸ. 7.30ಗೆ ಪಡಿಪೂಜೆ, ಮಹಾ ಮಂಗಳಾರತಿ ನಂತರ ಎಲ್ಲಾ ಭಕ್ತರಿಗೆ ಪ್ರಸಾದ ನೀಡಲಾಗುವುದು.ಅಯ್ಯಪ್ಪನ ಶ್ರದ್ಧಾಪೂರ್ವಕ ಭಕ್ತರು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದರಲ್ಲಿ ಭಾಗವಹಿಸಿ ಮತ್ತು ಅಯ್ಯಪ್ಪನ ಆಶೀರ್ವಾದವನ್ನು ಪಡೆದುಕೊಳ್ಳಿ ಎಂದು ಸದಾಸ್ – ಸದಾ ಧರ್ಮಶಾಸ್ಥಾನ ಸೇವೆಯಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.