ಚಿಕ್ಕಬಳ್ಳಾಪುರ: 14 ರಂದು ರಾಜ್ಯಮಟ್ಟದ ಯೋಗಿ ಸೇವಾರತ್ನ ಪ್ರಶಸ್ತಿಯನ್ನು ಗುಡಿಬಂಡೆ ಗುಂಪು ಮರದ ಆನಂದ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಮೂರು ಲಕ್ಷಕ್ಕೂ ಅಧಿಕ ಗಿಡಮರಗಳನ್ನು ಬೆಳೆಸಿ ಪೋಷಣೆ ಮಾಡಿದ್ದಾರೆ ಹಾಗೂ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ 30 ವರ್ಷ ಶಿಕ್ಷಣ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಯೋಗಿ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.
ಸದ್ಗುರು ಶ್ರೀ ಯೋಗಿ ನಾರೇಯಣ ಸೇವಾ ಟ್ರಸ್ಟ್ ನ 10ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ, ಸೇವಾ ರತ್ನ-2024. ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ ಡಾ.ಆರ್.ಕೃಷ್ಣ ತಿಳಿಸಿದ್ದಾರೆ.ಮಲ್ಲೇಶ್ವರ ಬಡಾವಣೆಯ ಸೇವಾ ಸದನ ಸಭಾಂಗಣದಲ್ಲಿ ಬೆಳಿಗ್ಗೆ 9:15 80 9:30 ಭಾಗವತ್ಪಾದ ನಾಮ ಸಂಕೀರ್ತನ ಭಜನಾ ಮಂಡಳಿ ಬ್ಯಾಟರಾಯನಪುರ ಇವರಿಂದ ಶ್ರೀ ಕೈವಾರ ನಾರೇಯಣ ಯತೀಂದ್ರರ ಆರಾಧನೆ, 9:30 ರಿಂದ 10:00 ರವರೆಗೆ ವೆಂಕಟೇಶ್ ಪ್ರಸಾದ್, ರಾಷ್ಟ್ರಪ್ರಶಸ್ತಿ ವಿಜೇತರು ಭರತನಾಟ್ಯ ಇವರ ತಂಡದಿಂದ ಪ್ರಾರ್ಥನೆ ನೃತ್ಯ, ಹಾಗೂ ಕೆ ವಿ ಎಸ್ ಎಸ್ ಕಲಾ ಬಳಗ,
ಕೀಲಾರಿ ಇವರ ವತಿಯಿಂದ ಜಾನಪದ ನೃತ್ಯ ಕಾರ್ಯಕ್ರಮ 10 ರಿಂದ 1:30 ಗಣ್ಯರಿಂದ ಹಿತನುಡಿ, ಸೇವಾರತ್ನ” ಪ್ರಶಸ್ತಿ ವಿವಿಧ ಸರ್ಕಾರಿ ಹಾಗೂ ಸೇವಾಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮುಖ್ಯ ಅತಿಥಿಗಳಿಗೆ. ವಿಶೇಷ ಅತಿಥಿಗಳಿಗೆ, ಪ್ರೋತ್ಸಾಹಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಶ್ರೀ ಶಿರಡಿ ಸಾಯಿ ಭಿಕ್ಷು ಕೇಂದ್ರ(ರಿ), ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀ ಲಕ್ಷ್ಮೀ ಶ್ರೀನಿವಾಸ್ ಗುರೂಜಿ, ಸಾಗರದ ಐಎಎಸ್ ಸಹಾಯಕ ಆಯುಕ್ತರು ಯತೀಶ್ ಆರ್,ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ರಾಜ್ಯಾಧ್ಯಕ್ಷಡಾ. ಎನ್.ಪಿ.ಮುನಿಕೃಷ್ಣ, ಕರ್ನಾಟಕ ಮೌಲ್ಯ ನಾರಾಯಣ್ ಸರೋಡೆ, ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.” ವಿ.ಮುನಿ ಸ್ವಾಮಿ, ಕೆ.ಸತ್ಯನಾರಾಯಣ ಆಹ್ವಾನಿಸಲಾಗಿದೆ ಎಂದು ಮಾಪನ ಪ್ರಾಧಿಕಾರ ನಿರ್ದೇಶಕರಾದ ಡಾ. ಎ ವಿ ಮಂಜುನಾಥ್, ಬಿಬಿಎಂಪಿ ಸದಸ್ಯರು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ನಿಕಟಪೂರ್ವ ಆಡಳಿತ ಪಕ್ಷದ ನಾಯಕರಾದ ಆರ್.ಎಸ್. ಸತ್ಯನಾರಾಯಣ, ಶ್ರೀ ಕೈವಾರ ನಾರೇಯಣ ಯತೀಂದ್ರರ ಕೀರ್ತನಾಕಾರರಾದ ಕೈವಾರ ರಾಮಣ್ಣ ಭಾಗವಹಿಸಲಿದ್ದಾರೆ.
“ಯೋಗಿ ಸೇವಾರತ್ನ” ಪ್ರಶಸ್ತಿ ಪುರಸ್ಕೃತರು:- ರಾಮನಗರದ ಶ್ರೀ ಗಣೇಶ ಜ್ಯುವೆಲ್ಲರಿಸ್ ಮಾಲೀಕರು ಹಾಗೂ ಸಮಾಜ ಸೇವಕರು ಲಕ್ಷಣ್, ಗುಂಪು ಮರದ ಗುಡಿಬಂಡೆ ಪರಿಸರ ಮಿತ್ರ ಆನಂದ್, ಕೋಲಾರದ ನೇತಾಜಿ ಹೂವಿನ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಡಾ. ನಾಗರಾಜ್, ಎಸ್.ವಿ. ಅವರು ಯೋಗಿ ಸೇವಾರತ್ನ ಪ್ರಶಸ್ತಿಗೆ ಭಾಜರಾಗಿರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನು ಸಿಂಧು ಸಿ. ಗುಪ್ತ ಮಾಡಲಿದ್ದಾರೆ. ಪದಾಧಿಕಾರಿಗಳಾದ ಡಾ. ಆರ್. ಕೃಷ್ಣ, ಸಂಸ್ಥಾಪಕರು. ಅಧ್ಯಕ್ಷರು ಎಸ್.ಪುಹಲ್ಲಿಕಾ. ಕಾರ್ಯದರ್ಶಿ ಜೋಡಿದಾರ್, ಮಕ್ಕಳು ಮತ್ತು ಸಾರ್ವಜನಿಕರು ಮುಂತಾದವರು ಪಾಲ್ಗೊಂಡಿದ್ದರು.