ಬೇಲೂರು:ಸತತ ನಾಲ್ಕ ದಶಕದಿಂದ ವಿದ್ಯಾಗಣಪತಿ ಪ್ರತಿಷ್ಠಾಪನೆ ಮಾಡುವ ಜೊತೆಗೆ ವಿವಿಧ ಜನಪರ ಕೆಲಸಗಳಿಗೆ ಮೀಸಲಾದ ಭೂಮಿಯನ್ನು ಪುರಸಭೆ ಖಾಸಗಿ ವ್ಯಕ್ತಿಗೆ ಇ-ಸ್ವತ್ತು ಮಾಡಿದ್ದಾರೆ ಬೆನ್ನಲ್ಲೆ ನೆಹರುನಗರ ನಿವಾಸಿಗಳು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ-ಸಂಸ್ಥೆಯ ಮುಖಂಡರು ಭೂಗಳ್ಳರಿಂದ ಭೂಮಿ ಉಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಗಣಪತಿ ಮಂಟಪದ ಜಾಗ ಉಳಿಸಲು ಹಿಂದೂಗಳ ಜೊತೆಗೆ ಮುಸ್ಲಿಂ ಭಾಂದವರು ಕೂಡ ಕೈಜೊಡಿಸುವ ಮೂಲಕ ನಡೆಸಿದ ಹೋರಾಟ ಸಾಮರಸ್ಯದಿಂದ ಕೂಡಿತ್ತು.
ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಕಳೆದ 40 ವರ್ಷದಿಂದ ನೆಹರುನಗರದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಸಲು ಅಂದು ಪೂರ್ಣೇಶಗೌಡರು ನಡೆಸಿದ ಹೋರಾಟ ಫಲ ಇನ್ನು ಜೀವಂತವಾಗಿದೆ. ಪುರಸಭೆಯಿಂದ ಈ ಜಾಗವನ್ನು ಒಂದುವೇಳೆ ಖಾಸಗಿ ವ್ಯಕ್ತಿಗೆ ಖಾತೆ ಇಲ್ಲವೇ ಇ-ಸ್ವತ್ತು ಮಾಡಿದರೆ ಅದನ್ನು ವಿಶೇಷಸಭೆಯನ್ನು ಕರೆದು ರದ್ದು ಪಡಿಸಲಾಗುತ್ತದೆ.ಈಗಾಗಲೇ ಶಾಸಕರಾದ ಹೆಚ್.ಕೆ.ಸುರೇಶ್ ಅವರು ಕೂಡ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಾಗೇಯೆ ಮಲ್ಲಿಕಾರ್ಜನ ಗ್ರೂಪ್ ನವರು ಧಾರ್ಮಿಕ ಕಾರ್ಯಗಳನ್ನು ನಡೆಸುವ ಜಾಗವನ್ನು ಬಿಟ್ಟು ಔದಾರ್ಯತೆ ಮರೆಯಬೇಕಿದೆ.ಹಿಂದೂ ಮುಸ್ಲಿಂ ಎನ್ನದೆ ಸೌಹಾರ್ಧತೆಯಿಂದ ಹೋರಾಟದಲ್ಲಿ ಭಾಗವಹಿಸಿದ ನಿಟ್ಟಿನಲ್ಲಿ ಗಣಪತಿ ಮಂಟಪ ಶಾಶ್ವತವಾಗಿ ಉಳಿಯುತ್ತದೆ ಎಂದರು.
ನೆಹರುನಗರ ಶ್ರೀ ವಿದ್ಯಾ ಗಣಪತಿ ಸೇವಾ ಟ್ರಸ್ಟ ಪದಾಧಿಕಾರಿ ಅರಣುಕುಮಾರ್. ಬೇಲೂರು ತಹಸೀಲ್ದಾರ್ ರಾತ್ರೋರಾತ್ರಿ ಈ ಜಾಗ ನಮಗೆ ಸೇರಿದೆ ಎಂದು ಕಲ್ಲುಕಂಬ ಹಾಕಿಸಲು ಬಂದಿದ್ದು ಎಷ್ಟರ ಮಟ್ಟಿಗೆ ಸರಿ, ಸರ್ಕಾರಿ ಆಸ್ತಿ ಇರಬಹುದು ರಾತ್ರಿವೇಳೆಯಲ್ಲಿ ಕಲ್ಲುಕಂಬ ಹಾಕುವ ಅತುರದ ಹಿಂದೆ ನಮಗೆ ಅನುಮಾನ ಕಾಡಿದೆ. ಅಲ್ಲದೆ ಪುರಸಭೆ ಕೂಡ ಸ್ಥಳ ಪರಿಶೀಲನೆ ನಡೆಸದೆ ಏಕಾಏಕಿ ಖಾತೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಇಲ್ಲವಾದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರೇಣುಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಕಾಂಗ್ರೆಸ್ ಮುಖಂಡ ಅಬ್ದುಲ್ ಸಮದ್, ಪುರಸಭಾ ಸದಸ್ಯರಾದ ಜಗದೀಶ್, ಜಮಾಲ್ಲುದ್ಧಿನ್, ಅಕ್ರಮಪಾಷ, ಕೋಗಿಲೆಮನೆ ಅರಣುಕುಮಾರ್, ಬಿ.ಎಂ.ರವಿಕುಮಾರ್, ಮಂಜುನಾಥ್, ರಾಜು, ತೋಟೇಶ್, ಜುಬೇರ್ , ತೌಫಿಕ್ ಅಬ್ರಾಹರ್ ಇನ್ನು ಮುಂತಾದವರು ಭಾಗವಹಿಸಿದ್ದರು.