ದೇವನಹಳ್ಳಿ: ಶಿವಶರಣ ಶಿವಯೋಗಿ ಸಿದ್ದರಾಮೇಶ್ವರರು ಕಾಯಕಯೋಗಿ ಮತ್ತು ದೈವಭಕ್ತರಾಗಿದ್ದರು, ಆದ್ದರಿಂದಲೇ ಸಿದ್ದರಾಮೇಶ್ವರರವರಿಗೆ ಅನುಭವ ಮಂಟಪದಲ್ಲಿ ಬಸವಣ್ಣನವರು ಉನ್ನತ ಸ್ಥಾನ ನೀಡಿದ್ದರು ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಸೀಲ್ದಾರ್ ಹೆಚ್.ಬಾಲಕೃಷ್ಣ ತಿಳಿಸಿದರು.
ಅವರು ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 853ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿ 12ನೇ ಶತಮಾನದ ಬಸವಾದಿ ಶರಣರು ನುಡಿದಂತೆ ನಡೆದಿದ್ದಾರೆ, ಸ್ವಾರ್ಥ ತ್ಯಜಿಸುವಂತೆ ಬಸವಾದಿ ಶರಣರು ಸಾಕಷ್ಟು ವಚನಗಳನ್ನು ರಚಿಸಿದ್ದಾರೆ, ನಾವು ಯಾವ ಕುಲದಲ್ಲಿ ಹುಟ್ಟಿದ್ದೇವೆ ಎನ್ನುವುದು ಮುಖ್ಯವಲ್ಲ, ಸಮಾಜಕ್ಕೆ ದಾರಿದೀಪವಾಗಿ ಬದುಕುವುದು ಹೇಗೆ ಎಂಬುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಹೊಣೆ ಅರಿತು ಶ್ರಮಿಸಬೇಕಿದೆ ಎಂದರು.
ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದ ಸಿದ್ದರಾಮೇಶ್ವರರನ್ನು ಅಲ್ಲಮಪ್ರಭುಗಳು ಮನಪರಿವರ್ತಿಸಿ ಸ್ವತ ಕಾಯಕ ಮಾಡಿ ಅನ್ನದಾಸೋಹ ಮಾಡುವ ಸಲಹೆ ನೀಡಿದ್ದರು,
ಸಿದ್ದರಾಮೇಶ್ವರರನ್ನು ಅನುಭವ ಮಂಟಪಕ್ಕೆಕರೆತಂದು ಶೂನ್ಯ ಪೀಠದ ಅಧ್ಯಕ್ಷರನ್ನಾಗಿಸು ತ್ತಾರೆ, ಅನುಭವ ಮಂಟಪದಲ್ಲಿ ಬಸವಣ್ಣನವರ ಮಾರ್ಗದರ್ಶನದಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಮನುಕುಲದ ಉದ್ಧಾರಕ್ಕೆ ಶ್ರಮಿಸುತ್ತ ಹಲವಾರು ವಚನಗಳನ್ನು ರಚಿಸಿದ್ದಾರೆ. ಅವುಗಳನ್ನು ಅರ್ಥೈಸಿಕೊಳ್ಳುವ ಕೆಲಸ ಇಂದಿನ ತಲೆಮಾರಿನ ಯುವಕರು ಮಾಡಬೇಕಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ತಮ್ಮಯ್ಯಣ್ಣ ಮಾತನಾಡಿ ನಮ್ಮ ಸಮುದಾಯದ ಮೂಲ ಕುಲಕಸುಬಾದ ಬಂಡೆ ಹೊಡೆಯುವ ಕೆಲಸ, ಬಂಡೆ ಹೊಡೆಯುವುದನ್ನು ನಿಲ್ಲಿಸಿರುವುದರಿಂದ ನಮ್ಮ ಸಮುದಾಯ ತೀರ್ವ ಸಂಕಷ್ಠ ಅನುಭವಿಸುವಂತಾಗಿದೆ ಸರ್ಕಾರ ನಮ್ಮ ಕಷ್ಠಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.ಈ ಸಮಯದಲ್ಲಿ ಬೋವಿ ಸಂಘದ ಅಧ್ಯಕ್ಷ ತಮ್ಮಯ್ಯಣ್ಣ, ಪ್ರ.ಕಾರ್ಯದರ್ಶಿ ಮುರಳಿ, ಉಪಾಧ್ಯಕ್ಷ ಮುನಿರಾಜ್, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ ಸಾದಹಳ್ಳಿ ನಾಗರಾಜ್, ತೈಲಗೆರೆ ಕೃಷ್ಣಪ್ಪ, ಸುರೇಶ್, ಶ್ರೀನಿವಾಸ್, ಮಧು, ರಾಮಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ್ ಓಲೇಕರ್, ರಂಗಪ್ಪ, ಬಸವರಾಜು, ವೆಂಕಟಾಚಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.