ಬೆಂಗಳೂರು: ಕಮರ್ಷಿಯಲ್ಸ್ಟ್ರೀಟ್ ಠಾಣೆಯಲ್ಲಿ ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ ಆರೋಪ ಪ್ರಕರಣದ ಬೆನ್ನಲ್ಲೇ ಶ್ವೇತಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲು ಮಾಡಲಾಗಿದೆ.ಶಿವಮೊಗ್ಗ ಮೂಲದ ಮತ್ತೋರ್ವ ಜುವೆಲರಿ ಮಾಲೀಕನಿಗೆ ವಂಚನೆ ಮಾಡಿದ ಬಗ್ಗೆ ದೂರು ದಾಖಲಾಗಿದೆ.
ಶಿವಮೊಗ್ಗದ ಸುಭಾಷ್ ನಗರದ ಪ್ರಗತಿ ಜುವೆಲರಿ ಶಾಪ್ ಮಾಲೀಕನಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸುಮಾರು 20 ಲಕ್ಷಕ್ಕು ಅಧಿಕ ಮೌಲ್ಯದ ಚಿನ್ನ ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಕೆಲ ತಿಂಗಳ ಹಿಂದೆ ಸಂಜಯ್ ಬಾಫ್ನ ಎಂಬುವರನ್ನು ಶ್ವೇತಾಗೌಡ ಪರಿಚಯ ಮಾಡಿಕೊಂಡು ಇದಾದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾಲ್ರಾಜ್ ಶೇಟ್ ಭೇಟಿ ಮಾಡಿ ಸಂಜಯ್ ಬಾಫ್ನ ಜೊತೆ ನಾನು ಕೋಟಿ ಕೋಟಿ ವ್ಯವಹಾರ ಮಾಡುತ್ತೇನೆ.
ಅವರು ಬಳಿ ಆಂಟಿಕ್ ಜ್ಯೂವೆಲರಿಗಳನ್ನ ಅವರ ಬಳಿ ಖರೀದಿ ಮಾಡುತ್ತೇನೆ. ಅಷ್ಟೇ ಏಕೆ ಅವರ ಬಳಿ ನಾನು ವಜ್ರದ ವ್ಯಾಪಾರ ಕೂಡ ಮಾಡುತ್ತೇನೆ. ನೀವು ನನಗೆ ಸುಮಾರು 285 ಗ್ರಾಂ ತೂಕದ ಆಂಟಿಕ್ ಚಿನ್ನ ಮಾಡಿಕೊಡಿ ಎಂದು ಬಾಲರಾಜ್ ಸೇಠ್ ನ ಯುಬಿಸಿಟಿ ಬಳಿಯ ಕಾಫಿ ಡೇಯಲ್ಲಿ ಭೇಟಿ ಶ್ವೇತಾಗೌಡ ಆಮೇಲೆ ನಾಪತ್ತೆಯಾಗಿದ್ದಾರೆ.