ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಮನೆಯ ಅಲಂಕಾರದ ಕಡೆಗೆ ಮಹಿಳೆಯರು ಹೆಚ್ಚು ಗಮನ ಕೊಡುತ್ತಾರೆ. ಇದೀಗ ಎಲ್ಲರ ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡುತ್ತಿದ್ದು , ಮನೆಯ ಮುಂಭಾಗದಲ್ಲಿ ವಿವಿಧ ವಿನ್ಯಾಸದ ರಂಗೋಲಿ ಹಾಕಿ ಮನೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಹಾಗಾದ್ರೆ ಮಕರ ಸಂಕ್ರಾಂತಿ ಹಬ್ಬಕ್ಕೆ ಆಕರ್ಷಕ ರಂಗೋಲಿ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಿ.
ಹಿಂದೂಗಳ ಪ್ರಮುಖ ಹಬ್ಬವಾಗಿರುವ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14ರಂದು ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಯೊಂದಿಗೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕರೆಯಲಾಗುತ್ತದೆ. ಸಂಕ್ರಾಂತಿ ಹಬ್ಬಕ್ಕೆ ಮನೆಗೆ ತೋರಣ ಕಟ್ಟಿ ಅಲಂಕರಿಸಲಾಗುತ್ತದೆ. ರಂಗೋಲಿ ಶುಭದ ಸಂಕೇತವಾಗಿದ್ದು, ಮನೆಯ ಮುಂದೆ ರಂಗೋಲಿ ಬಿಡಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ..ಈ ಬಾರಿಯ ಮಕರ ಸಂಕ್ರಾಂತಿಯಂದು ಈ ರೀತಿ ಆಕರ್ಷಕ ವಿನ್ಯಾಸ ರಂಗೋಲಿ ಹಾಕಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಿ.
- ಧಾನ್ಯಗಳಿಂದ ರಂಗೋಲಿ : ಸುಗ್ಗಿಯ ಹಬ್ಬಕ್ಕೆ ಧಾನ್ಯದ ರಂಗೋಲಿಯನ್ನು ಬಿಡಿಸಬಹುದು. ಇಲ್ಲಿ ರಂಗೋಲಿ ಬಿಡಿಸಲು ಪುಡಿ ಬದಲಿಗೆ ವಿವಿಧ ಧಾನ್ಯಗಳನ್ನು ಬಳಸಬಹುದು. ಇದು ಸಂಕ್ರಾಂತಿ ಹಬ್ಬಕ್ಕೆ ತುಂಬಾ ಸೂಕ್ತವಾದ ರಂಗೋಲಿಯಾಗಿದ್ದು, ಈ ರೀತಿ ರಂಗೋಲಿ ಬಿಡಿಸಿದರೆ ಸುಗ್ಗಿ ಹಬ್ಬದ ಸಂಭ್ರಮದ ಕಳೆಯು ಬರುತ್ತದೆ.
- ಭಾವುಟ ರಂಗೋಲಿ ವಿನ್ಯಾಸ : ಸಂಕ್ರಾಂತಿಯಂದು ಕೆಲವು ಕಡೆ ಬಾವುಟಗಳನ್ನು ಹಾರಿಸಿ ಸಂಭ್ರಮಿಸಲಾಗುತ್ತದೆ. ನಿಮ್ಮ ಮನೆಯ ದ್ವಾರದಲ್ಲಿ ಬಣ್ಣಬಣ್ಣದ ಗಾಳಿಪಟದ ಆಕಾರದಲ್ಲಿ ರಂಗೋಲಿ ಬಿಡಿಸಿ ಅಲಂಕಾರಿಕ ವಸ್ತುಗಳೊಂದಿಗೆ ಅಲಂಕರಿಸಿ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೀವು ಭಾವುಟದ ರಂಗೋಲಿ ಸುಲಭವಾಗಿ ಬಿಡಿಸಬಹುದು.
- ನವಿಲಿನ ವಿನ್ಯಾಸದ ರಂಗೋಲಿ : ಸಂಕ್ರಾಂತಿಗೆ ನವಿಲು ವಿನ್ಯಾಸದಲ್ಲಿ ರಂಗೋಲಿ ಬಿಡಿಸಿ. ಇದು ಹಬ್ಬಕ್ಕೆ ನಿಜವಾದ ಕಳೆಯನ್ನು ತಂದುಕೊಡುತ್ತದೆ. ನಿಮ್ಮ ಮನೆ ಅಥವಾ ನಿಮ್ಮ ಪೂಜಾ ಕೊಠಡಿಯ ಪ್ರವೇಶದ್ವಾರದಲ್ಲಿ ಅಲಂಕಾರಿಕ ನವಿಲಿನ ಆಕಾರದ ರಂಗೋಲಿ ಬಿಡಿಸಿ, ಹೂವುಗಳಿಂದ ಅಲಂಕರಿಸಿದರೆ ಮನೆಯ ಮುಂಭಾಗದ ನೋಟವೇ ಬದಲಾಗುತ್ತದೆ.
- ಸೂರ್ಯ ಸಂಕ್ರಮಣ ಆಧಾರಿತ ರಂಗೋಲಿ : ಮಕರ ಸಂಕ್ರಾಂತಿಯಂದು ಸೂರ್ಯ ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಹೀಗಾಗಿ ಸೂರ್ಯನನ್ನು ಆಧಾರಿತ ರಂಗೋಲಿ ಬಿಡಿಸಬಹುದು. ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳ ಬಳಸಿ ಈ ಚಿತ್ತಾರ ಬರೆದರೆ ಹೆಚ್ಚು ಆಕರ್ಷಕವಾಗಿಸುತ್ತದೆ.
- ಹೂವುಗಳಿಂದ ರಂಗೋಲಿ ವಿನ್ಯಾಸ : ರಂಗೋಲಿ ಮಾಡಲು ನಿಮಗೆ ಹೆಚ್ಚು ಸಮಯವಿಲ್ಲ ಎನ್ನುವವರು ಹೂಗಳ ಎಸಳಿನಿಂದ ರಂಗೋಲಿ ಬಿಡಿಸಬಹುದು. ಮಾರಿಗೋಲ್ಡ್ ಹಾಗೂ ಗುಲಾಬಿ ಹೂವಿನ ಎಸಳನ್ನು ಬಳಸಿ ರಂಗೋಲಿ ಬಿಡಿಸಿದರೆ ನಿಮ್ಮ ಮನೆಯ ಮುಂಭಾಗವು ಆಕರ್ಷಕವಾಗಿ ಕಾಣಿಸುತ್ತದೆ.