ಬೆಂಗಳೂರು: `ಹೊಸತನದ ಅನಾವರಣ, ನಾಳೆಗಳ ಸಶಕ್ತೀಕರಣ’. 50 ವರ್ಷಗಳ ಸುದೀರ್ಘ ಪಯಣದ ಮೈಲಿಗಲ್ಲು ಸಾಧಿಸಿರುವ ಸಂಗೀತಾ, ಮೊಬೈಲ್ಗಳ ವಿಭಾಗದಲ್ಲಿ ಭಾರತದ ಮೊಟ್ಟ ಮೊದಲ ವೈಶಿಷ್ಟ್ಯಗಳ ಮಳಿಗೆಯಾಗಿ ಗುರುತಿಸಿಕೊಂಡಿದ್ದು ಸುವರ್ಣ ಸಂಭ್ರಮದ ಈ ಹೊತ್ತಿನಲ್ಲಿ ತನ್ನ ನೂತನ ಆಡಳಿತ ಕಚೇರಿ, ‘ಸಂಗೀತಾ ವಿಷನ್’, ಮತ್ತು ಹೊಸತನದಿಂದ ಕೂಡಿದ ಅತ್ಯುತ್ತಮ ಮಳಿಗೆ ‘ಸಂಗೀತಾ ಗ್ಯಾಜೆಟ್ಸ್’ನ್ನು ಬೆಂಗಳೂರಿನ ಜಯನಗರದಲ್ಲಿ ಲೋಕಾರ್ಪಣೆಗೊಳಿಸಿತು.
ಸಂಗೀತಾ ಸುವರ್ಣ ಮಹೋತ್ಸವ ಸಂಭ್ರಮದ ಭವ್ಯ ಸಮಾರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ಚಲನಚಿತ್ರ ನಟ, ನಿರ್ದೇಶಕ ಡಾ.ರಮೇಶ್ ಅರವಿಂದ್ ಅವರಉಪಸ್ಥಿತಿಯಲ್ಲಿ ಆಡಳಿತ ಕಚೇರಿ ಮತ್ತು ನೂತನ ಮಳಿಗೆ ಶುಭಾರಂಭಗೊಂಡವು. ನಂದನ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ರವಿಚಂದರ್ ಅವರು ಜ್ಯೋತಿ ಬೆಳಗಿದರು. ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ, ದಕ್ಷಿಣ ಬೆಂಗಳೂರು ಬಿಜೆಪಿ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್, ಅಡ್ಯಾರ್ ಆನಂದ ಭವನದ ವ್ಯವಸ್ಥಾಪಕ ನಿರ್ದೇಶಕ ಕೆ.ಟಿ.ವೆಂಕಟೇಶ ರಾವ್ ಮೊದಲಾದವರು ಭಾಗವಹಿಸಿ ಸಂಗೀತಾದ ಪರಂಪರೆ ಮತ್ತು ವಿಶೇಷವಾಗಿ ಮೊಬೈಲ್ ವಿಭಾಗದಲ್ಲಿ ವೈಶಿಷ್ಟ್ಯತೆಯನ್ನು ಶ್ಲಾಘಿಸಿದರು.
ಸಂಗೀತಾದ ನೂತನ ಆಡಳಿತ ಕಚೇರಿ ಸಂಗೀತಾ ವಿಷನ್ ಅನಾವರಣಗೊಳಿಸಿ ಮಾತನಾಡಿದ ಸಂಗೀತಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಭಾಶ್ಚಂದ್ರ ಅವರು ಹಣಕಾಸು ವರ್ಷ 2025-26ರಲ್ಲಿ ಸಂಗೀತಾ ತನ್ನ ಸಮೂಹಕ್ಕೆ 1,000 ಮಳಿಗೆಗಳನ್ನು ಸೇರ್ಪಡೆಗೊಳಿಸುವುದಾಗಿ ಘೋಷಿಸಿದರು. ಜೊತೆಗೆ ಪ್ರಸ್ತುತ ಇರುವ ಮೊಬೈಲ್ ಉಪಕರಣಗಳ (ಗ್ಯಾಜೆಟ್ಗಳ) ವಿಸ್ತರಣೆ ಜೊತೆಗೆ ಭೌಗೋಳಿಕ ವಿಸ್ತರಣೆಗೆ ಅನುಗುಣವಾಗಿ ಸಂಗೀತಾ ಕೂಡ ತನ್ನ ವಿಸ್ತರಣೆ ಕೈಗೊಳ್ಳಲಿದೆ ಎಂದು ತಿಳಿಸಿದರು.