ಬೆಂಗಳೂರು: ಸಂಗೀತ ಕೇಳುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ, ಮಾನಸಿಕ ಒತ್ತಡದಿಂದ ದೂರ ಮಾಡಿ ತಲೆನೋವಿನಂತಹ ಸಣ್ಣಪುಟ್ಟ ಖಾಯಿಲೆಗಳು ದೂರವಾಗುತ್ತದೆ. ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆ ನೋವು ಅನುಭವಿಸುವ ಮಾತೆಯರಿಗೆ ಸುಮಧುರ ಸಂಗೀತ,ದೇವರನಾಮ ಕೇಳುವುದರಿಂದ ಹೆರಿಗೆ ನೋವು ಮರೆತು ಸಹಜ ಹೆರಿಗೆಯಿಂದ ಸಂತೋಷವಾಗಿರುತ್ತಾರೆ ಎಂದು ಡಾ.ಶಿವರಾಜಗೌಡರವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೆಂಗಳೂರು ಕಮಲಾನಗರದ ಅಕ್ಷರ ಆಡಿಟೋರಿಯಂನಲ್ಲಿ ಏರ್ಪಡಿಸಿದ ಗೌತಮ್ ಜಿಂಪೆಟ್ಸ್ ಮ್ಯೂಸಿಕ್ರವರು ಕರೋಕೆ ಗಾಯನ ಕಾರ್ಯಕ್ರಮ ಏರ್ಪಡಿಸಿದ್ದರು. ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾಭಿಮಾನಿಗಳಿಗೆ ಮನರಂಜನೆ ನೀಡಿದರು. ಕೆಇಬಿ ರಾಜು,ರಾಘವೇಂದ್ರ (ರಘು) ಮಾಲೂರು ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶಿಹಾನ್ ಡಾ.ಕರಾಟೆ ಎ.ಪಿ.ಶ್ರೀನಾಥ್, ಹಾಡುಗಾರಿಕೆ ಚಲನಚಿತ್ರ ನಿರ್ಮಾಪಕ ನಂದನ್, ನಾರಾಯಣ ನೇತ್ರಾಲಯ ನಂದೀಶ್, ಗೌರಿಪ್ರಸಾದ್, ಪರಂಗುಬ್ಬಿ, ಬೆಂಗಳೂರುಶುಭ, ಗೀತಾ ಚಂದ್ರಶೇಖರ್ ಸೇರಿದಂತೆ ಅನೇಕರಿದ್ದರು.
ಚಿತ್ರ:ಜಿ.ಎಲ್.ಸಂಪಂಗಿರಾಮುಲು