ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಸಂಜೆ ರಾಜ್ಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಇಂದು ರಾಜ್ಯಪ್ರವಾಸ ದಲ್ಲಿರುವ ನಡ್ಡಾ ಅವರು ಸಂಜೆ 6ಗಂಟೆಯಿಂದ 7 ಗಂಟೆಯವರೆಗೆ ತಮ್ಮನ್ನು ಭೇಟಿ ಮಾಡಲು ಕೆಲ ಪ್ರಮುಖ ನಾಯಕರಿಗೆ ಸಮಯ ನೀಡಿದ್ದರೆ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದ ನಡ್ಡಾ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ವಿಮಾನ ನಿಲ್ದಾಣದಿಂದ ಕುಮಾರಕೃಪ ಅತಿಥಿಗೃಹದವರೆಗೆ ನಡ್ಡಾ ಅವರ ಜತೆಯಲ್ಲಿ ಬಂದು ಅವರಿಗೆ ರಾಜ್ಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಂಜೆ ನಡ್ಡರನ್ನು ಭೇಟಿ ಮಾಡಲಿರುವ ನಾಯಕರು ತಿಳಿಸುವ ಮಾಹಿತಿ ಬಗ್ಗೆಯೂ ಕುತೂಹಲ ಮೂಡಿಸಿದೆ.