ಬೆಂಗಳೂರು/ಶಿವಮೊಗ್ಗ: ಕಲಾಭೂಮಿ ಪ್ರತಿಷ್ಠಾನ (ರಿ) ಸಂಧ್ಯಾ ಸೊರಬಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದು, ಪತ್ರಿಕೋದ್ಯಮ ಮತ್ತು ಹವ್ಯಾಸಿ ರಂಗಭೂಮಿಯಲ್ಲಿನ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ” ನೀಡುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ನವೆಂಬರ್ 29ರಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ ಎಂದು ಕಲಾಭೂಮಿ ಪ್ರತಿಷ್ಠಾನದ ಸಂಸ್ಥಾಪಕ ನಟ,ನಿರ್ದೇಶಕ ಆಸ್ಕರ್ ಕೃಷ್ಣಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಧ್ಯಾ ಸೊರಬ ಇವರು ಸೊರಬದ ಹಿರಿಯ ಪತ್ರಕರ್ತ ಯು.ಎನ್.ಲಕ್ಷ್ಮೀಕಾಂತ್ ಇವರ ಹಿರಿಯ ಪುತ್ರಿಯಾಗಿದ್ದು, ಕಳೆದ 14 ವರ್ಷಗಳಿಂದ ಮುದ್ರಣ,ದೃಶ್ಯಮಾಧ್ಯಮ ಪತ್ರಿಕೋದ್ಯಮದಲ್ಲಿ ರಾಜಕೀಯ ವರದಿಗಾರಿಕೆ,ವಿಶ್ಲೇಷಣೆ ನಿರೂಪಣೆ ಸೇರಿದಂತೆ ವಿವಿಧ ವಿಭಾಗ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇಲ್ಲಿಯವರೆಗೆ ಸಂಧ್ಯಾ ಸೊರಬ ಇವರಿಗೆ ತಾಲೂಕು ಆಡಳಿತ ವತಿಯಿಂದ ಗಣರಾಜ್ಯೋತ್ಸವ ಪ್ರಶಸ್ತಿ,ಉತ್ತರ ಕರ್ನಾಟಕ ಸಂಘದ ಬಹುಮುಖ ಪ್ರತಿಭೆ, ರಾಜ್ಯಮಟ್ಟದ ವಿಠ್ಠಲಶ್ರೀ ಹಾಗೂ ಟ್ವೆಲ್ ಮೀಡಿಯಾದಿಂದ ಆಲ್ ಇಂಡಿಯಾ ವುಮೆನ್ ಅಚೀವರ್ಸ್ ಚೇಂಜ್ ಮೇಕರ್ ಪ್ರಶಸ್ತಿ ಲಭಿಸಿದೆ.