ಜಾಂಬವ ಖಂಡದ ವಿಶ್ವದಲ್ಲೆಡೆಯಲ್ಲಿರುವ ಭಾರತೀಯರೆಲ್ಲರಿಗೂ ಇದು ಹಬ್ಬದ ಸಂಭ್ರಮಾಚರಣೆ ಸ್ವಾತಂತ್ರ ಸಮಾನತೆ, ಭ್ರಾತೃತ್ವಕ್ಕಾಗಿ ಭಾರತದ ಸಂವಿಧಾನವಿದೆ. ಬದುಕುವುದು ಎಂದರೆ ಬದಲಾಗುವುದು. ಅದರಲ್ಲೂ ಪರಿಪೂರ್ಣತೆ ಸಾಧಿಸಬೇಕೆಂದರೆ ಆಗಾಗ್ಗೆ ಬದಲಾಗುತ್ತಿರಬೇಕು ಮನುಷ್ಯ ಮತ್ತು ನೈತಿಕತೆ, ಧರ್ಮದ ಕೇಂದ್ರವಾಗಬೇಕು ಇಲ್ಲವಾದಲ್ಲಿ ಧರ್ಮವೆಂಬುವುದು ಕಠೋರ ಅಂಧ ಶ್ರದ್ಧೆಯೆನಿಸುತ್ತದೆ. ಎಂದು ಭಾರತರತ್ನ ಜ್ಞಾನರತ್ನ ಬಿ.ಆರ್. ಅಂಬೇಡ್ಕರ್ರವರು ನುಡಿದಿದ್ದಾರೆ.
ಸಂವಿಧಾನವೆಂದರೆ ‘ರಾಜ್ಯವನ್ನಾಳುವ ಕಾನೂನು’ ಎಂದು ಮೆಕೈವರ್ ಹೇಳಿದ್ದಾರೆ. ಸಂವಿಧಾನದ ಮುಖ್ಯ ಉದ್ದೇಶ ಸರ್ಕಾರವು ದಬ್ಬಾಳಿಕೆ ನಡೆಸದಂತೆ ಅದನ್ನು ಹತೋಟಿಯಲ್ಲಿಟ್ಟು ಆ ಮೂಲಕ ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸುವುದು.ಸರ್ಕಾರದ ರಚನಾಕ್ರಮ, ಸರ್ಕಾರದ ವಿವಿಧ ಅಂಗಗಳ ಅಧಿಕಾರ ವ್ಯಾಪ್ತಿ ಹಾಗೂ ಕರ್ತವ್ಯಗಳು ಮತ್ತು ಸರ್ಕಾರ ಹಾಗೂ ಪ್ರಜೆಗಳ ನಡುವಿನ ಸಂಬಂಧ ಸರ್ಕಾರ ಮತ್ತು ಸಂವಿಧಾನಗಳು ಒಂದೇ ನಾಣ್ಯದ ಎರಡು ಮುಖಗಳೆಂದು ಹೇಳಬಹುದು. ಅಲ್ಲದೆ ರಾಜ್ಯದ ಸ್ವರೂಪವನ್ನು ನಿರ್ಧರಿಸುವ ಮೂಲ ತತ್ವಗಳೇ ಸಂವಿಧಾನ ಎನ್ನಲಾಗಿದೆ.
ಸಂವಿಧಾನವು ರಾಜ್ಯವನ್ನು ಸಂಘಟಿಸುವ ವಿಧಾನ, ಸರ್ಕಾರದ ವಿವಿಧ ಅಂಗಗಳಲ್ಲಿ ಅಧಿಕಾರ ವಿತರಣೆ, ಸರ್ಕಾರದ ಅಧಿಕಾರ ವ್ಯಾಪ್ತಿ, ಸರ್ಕಾರ ಮತ್ತು ಪ್ರಜೆಗಳ ನಡುವಿರುವ ಸಂಬಂಧ ಗೌರವವನ್ನು ಇರಬೇಕು .ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳೆಂದರೆ ಸಂವಿಧಾನವು ಸರ್ಕಾರದ ರಚನಾ ಸ್ವರೂಪವನ್ನು ನಿರ್ಧರಿಸುತ್ತದೆ. ಸರ್ಕಾರದ ವಿವಿಧ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಜವಾಬ್ದಾರಿಯುತವಾದ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸುತ್ತದೆ. ಮತ್ತು ಅದು ಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ನಿರ್ದೇಶಿಸುತ್ತದೆ.
ಸಂವಿಧಾನದಲ್ಲಿ ನಮೂದಿಸಿರುವ ನಿರ್ದಿಷ್ಟವಾದ ನಿಯಮಾವಳಿಗನುಸಾರವಾಗಿ ರಾಜ್ಯಾಡಳಿತ ನಡೆಸುವ ಸರ್ಕಾರವೇ ಸಂವಿಧಾನ ಬದ್ಧ ಸರ್ಕಾರವಾಗಿರುತ್ತದೆ.
1498 ರಲ್ಲಿ ವಾಸ್ಕೋಡಿಗಾಮನು ಪೋರ್ಚುಗಲ್ಲಿನಿಂದ ಮೂರು ಹಡಗುಗಳೊಂದಿಗೆ ಸಮುದ್ರಯಾನ ಕೈಗೊಂಡು ಆಫ್ರಿಕಾ ಖಂಡವನ್ನು ಸುತ್ತಿ ಗುಡ್ಹೋಪ್ ಭೂಶಿರದ ಮುಖಾಂತರ ಭಾರತಕ್ಕೆ ಬಂದನು. ತದನಂತರ 1600ರಲ್ಲಿ ” ಈಸ್ಟ್ ಇಂಡಿಯಾ ಕಂಪನಿ ” ಎಂಬ ವ್ಯಾಪಾರ ವಹಿವಾಟು ಸಂಸ್ಥೆ ಸ್ಥಾಪಿಸಿದರು. 1857ರ ಕ್ರಾಂತಿಯ ನಂತರ ಭಾರತದ ಆಡಳಿತ ಎಲಿಜಬತ್ ರಾಣಿಯ ಕೈಗೆ ವರ್ಗಾವಣೆಯಾಯಿತು. ಆನಂತರ 1947ರ ಆಗಸ್ಟ್ 15 ರವರೆಗೂ ಭಾರತವು ಬ್ರಿಟಿಷರ ವಸಾಹತುವಾಗಿಯೆ ಉಳಿಯಿತು.
1773 ರಿಂದ 1857 ರವರೆಗಿನ ಸಾಂವಿಧಾನಿಕ ಬೆಳವಣಿಗೆಯನ್ನು ಪ್ರಥಮ ಹಂತ ಎಂದು ಹೇಳುವುದಾದರೆ, 1851 ರಿಂದ 1909 ರವರೆಗೆ ಪಸರಿಸಿ, ದಿ ಗೌರ್ಮೆಂಟ್ ಆಫ್ ಇಂಡಿಯನ್ ಆಕ್ಟ್ ಆಫ್ 1858, ತದನಂತರ 1910 ರಿಂದ 1939 ರವರೆಗೆ ಬದ್ಧವಾಯಿತು. 1941ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿತು.
1947 ರ ಜುಲೈ 4ರಂದು ಬ್ರಿಟಿಷ್ ಪಾರ್ಲಿಮೆಂಟ್ ಭಾರತ ಸ್ವಾತಂತ್ರ್ಯ ಕಾಯ್ದೆಯನ್ನು ಅಂಗೀಕರಿಸಿತು. ಆಗಸ್ಟ್ 15ರಂದು ಭಾರತ ಪಾಕಿಸ್ತಾನಗಳೆಂಬ ಎರಡು ಸ್ವತಂತ್ರ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು ತದನಂತರ ಭಾರತಕ್ಕೆ ತನ್ನದೇ ಆದ ಒಂದು ಸಂವಿಧಾನ ಅಗತ್ಯವಿತ್ತು. ಆದರಿಂದ 1946ರ ಮೇ 16ರ ಕ್ಯಾಬಿನೆಟ್ ಮಿಷಿನ್ ಪ್ಲಾನ್ನ ಪ್ರಕಾರ ಡಿಸೆಂಬರ್ 8ರಂದು ಸಂವಿಧಾನ ರಚನೆ ಸಭೆಯನ್ನು ರಚಿಸಲಾಯಿತು. ಅದರಲ್ಲಿದ್ದ ಸದಸ್ಯರ ಸಂಖ್ಯೆ 389 ಇದ್ದದ್ದು ಸ್ವಾತಂತ್ರ್ಯದ ನಂತರ 300ಕ್ಕೆ ಇಳಿಯಿತು.
ನಮ್ಮೆಲ್ಲರ ಹೆಮ್ಮೆಯ ಲಿಖಿತ ಬೃಹತ್ ಸಂವಿಧಾನವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತದೆ. ಕಾಯಿದೆಯ ಎದುರಿನಲ್ಲಿ ಎಲ್ಲರೂ ಸಮಾನರು ಎಂದು ಸಾರುತ್ತದೆ. ಸಂವಿಧಾನದ ಪಾರಮ್ಯತೆ , ಎಲ್ಲರಿಗೂ ನ್ಯಾಯ ಸ್ವಾತಂತ್ರ್ಯ ಮತ್ತು ಬಂಧುತ್ವ ದೊರೆಯುವಂತೆ ಮಾಡಿದೆ. ರಾಷ್ಟ್ರದ ಸೌರ್ವಭೌಮಾಧಿಕಾರದ ಮೂಲ ನೆಲೆಯೇ ಜನತೆಗೆ ನೀಡಿದ ಏಕೈಕ ದೇಶ.