ದೆಹಲಿ: ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.75ನೇ ವರ್ಷದ ಸಂವಿಧಾನದಿನಾಚರಣೆ ಅಂಗವಾಗಿ ಹಳೆ ಸಂಸತ್ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ನಾವು ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದೇವೆ.
ಸಂವಿಧಾನ ನಿರ್ಮಾತೃವಿಗೆ ಕೃತಜ್ಞತೆಗಳು ಹಾಗೂ ನಮನಗಳು. ಸಂವಿಧಾನ ರಚನೆಗೆ ಕೊಡುಗೆ ನೀಡಿದ ಮಹಿಳೆಯರಿಗೂ ನಮನಗಳು ಎಂದು ತಿಳಿಸಿದ ಅವರು ಪ್ರಜಾಪ್ರಭುತ್ವ ತಾಯಿ ಇದ್ದಂತೆ ಎಂದು ಬಣ್ಣಿಸಿದ ರಾಷ್ಟ್ರಪತಿ ಅವರು ಹಲವು ಮಹನೀಯರನ್ನು ಕೊಡುಗೆಯಾಗಿ ನೀಡಿದೆ ಎಂದು ಸಂವಿಧಾನದ ಪೀಠಿಕೆಯನ್ನು ಇದೇ ಸಂದರ್ಭದಲ್ಲಿ ವಾಚಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕಸಭೆ ಅಧ್ಯಕ್ಷ ಓಂಬಿರ್ಲಾ ಅವರು, ಸಂವಿಧಾನ ಇಡೀ ವಿಶ್ವದ ಕುಟುಂಬವಿದ್ದಂತೆ ಎಂದು ಬಣ್ಣಿಸಿದರು.