ಯಲಹಂಕ: ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಲಕ್ಷ್ಮಿಪುರ ಕಾಲೋನಿ ನಿವಾಸಿಗಳು ಹಾಗೂ ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ (ರಿ) ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೂತನ ಪುತ್ತಳಿಯನ್ನು ಅನಾವರಣಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಗಡಿ ಮುಖ್ಯ ರಸ್ತೆಯ ಗಂಗೊಂಡನಹಳ್ಳಿ ಸಮೀಪದ ಕಾಲೋನಿ ಸರ್ಕಲ್ ಗೆ ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ ಎಂದು ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ ರಾಜ್ಯಾಧ್ಯಕ್ಷ ಸಿದ್ದಲಿಂಗಯ್ಯ ತಿಳಿಸಿದರು.ದಲಿತ ಪರ ಮುಖಂಡರು ಹಾಗೂ ಲಕ್ಷ್ಮಿಪುರ ಕಾಲೋನಿ ನಿವಾಸಿಗಳು ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಿದ್ದು ಅವರ ಸಹಕಾರ ಪರಿಶ್ರಮದಿಂದ ಈ ಕಾರ್ಯ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ ರಾಜ್ಯಾಧ್ಯಕ್ಷ, ಸಿದ್ದಲಿಂಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಜಿ.ವೆಂಕಟೇಶ್ ಮೂರ್ತಿ, ಮಾದವರ ಹನುಮಂತರಾಜು, ರಾಜ್ಯ ಖಜಾಂಚಿ ಹನುಮಂತರಾಜು ದಲಿತ ಪರ ಸಂಘಟನೆ ರಾಜ್ಯಾಧ್ಯಕ್ಷ ಚನ್ನಕೇಶವ,ಸಿದ್ದಮ್ಮ ನಾಗರಾಜು, ಚಿಕ್ಕಣ್ಣ, ನಾಗೇಶ್, ರಾಮಾಂಜಿನಪ್ಪ ಯುವ ಮುಖಂಡ ಮಾರುತಿ, ಹನುಮಂತರಾಜು, ನವೀನ್ ಸೇರಿದಂತೆ ಹಿರಿಯ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.