ಆರೂಢ ಭಾರತಿ ಮಹಾಸ್ವಾಮೀಜಿಗಳು ಅಸ್ಮಾಕಂ ಸಂಸ್ಕೃತಮ್ ವಿಷಯ ಬಗ್ಗೆ ಮಾತನಾಡುತ್ತಾ ಸಂಸ್ಕೃತವು ಪ್ರಾಚೀನ ಕಾಲದಿಂದಲೂ ಗಟ್ಟಿಯಾಗಿ ಉಳಿದ ಭಾಷೆಯಾಗಿದ್ದು ಇದು ವಿಶ್ವಾದ್ಯಂತ ಬೆಳೆದಿದೆ.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಬಿ. ಆರ್. ಸದಾಶಿವಯ್ಯರವರು ವೈಜ್ಞಾನಿಕ ಸಂಶೋಧನೆಗೆ ಸಂಸ್ಕೃತ ಗ್ರಂಥಗಳು ಪ್ರೇರಣೆಯಾಗಿವೆ ಎಂಬ ಹೈನ್ಟೇಸೈನ್ ರವರ ಹೇಳಿಕೆಯನ್ನು ಉಲ್ಲೇಖಿಸಿದರು. ಪ್ರಾಸ್ತಾವಿಕವಾಗಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಮಾತನಾಡಿದ ಡಾ. ಜಗದೀಶ್ ರವರು ಮಾತನಾಡಿ ಬರೆಯುವುದನ್ನು ಓದುವ ಓದುವುದನ್ನು ಬರೆಯುವ ಭಾಷೆ ಸಂಸ್ಕೃತವು ಅತ್ಯುಮೂಲ್ಯವಾಗಿದೆ ಎಂದರು ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪಂಕಜ.ಆರ್ ನಡೆಸಿಕೊಟ್ಟರು. ಆಶಾ ಸ್ವಾಗತ ಕೋರಿದರು. ಎಸ್. ರಮೇಶ ವಂದನಾರ್ಪಣೆ ಮಾಡಿದರು ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.