ದೇವನಹಳ್ಳಿ: ಮೊದಲು ನಷ್ಟದಲ್ಲಿದ್ದ ದೇವನಹಳ್ಳಿ ತಾಲ್ಲೂಕುಗ್ರಾಮೋದ್ಯೋಗ ಕಸಬುದಾರರ ಕೈಗಾರಿಕ ವಿವಿಧೋದ್ದೇಶ ಸಹಕಾರ ಸಂಘ ಸದಸ್ಯರೆಲ್ಲರ ಪರಿಶ್ರಮದಿಂದ ಇಂದು ಪ್ರತಿತಿಂಗಳು ಸುಮಾರು 2 ಲಕ್ಷಕ್ಕೂ ಅಧಿಕ ಲಾಭಗಳಿಸುವತ್ತ ಹೆಜ್ಜೆ ಇಟ್ಟಿದೆ, ವಾಣಿಜ್ಯ ಸಂಕೀರ್ಣ ಮಾಡಿರುವುದೇ ಇದಕ್ಕೆ ಕಾರಣ, ಕೇಂದ್ರ ಮಾಜಿ ಸಚಿವ ವೀರಪ್ಪಮೊಯಿಲಿ 25ಲಕ್ಷ, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ 5ಲಕ್ಷ, ದಿ|| ಕೆ.ವೆಂಕಟಸ್ವಾಮಿ 5ಲಕ್ಷ ಧನ ಸಹಾಯ ನೀಡಿದ್ದು ಇದಕ್ಕೆ ಅನೇಕ ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ, ಎಂದು ಮಾಜಿ ಜಿ.ಪಂ.ಸದಸ್ಯ ಲಕ್ಷ್ಮೀನಾರಾಯಣಪ್ಪ ತಿಳಿಸಿದರು.
ಅವರು ಪಟ್ಟಣದ ಬಸವೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ದೇವನಹಳ್ಳಿ ತಾಲ್ಲೂಕು ಗ್ರಾಮೋದ್ಯೋಗ ಕಸಬುದಾರರ ದೇವನಹಳ್ಳಿ ತಾಲ್ಲೂಕು ಗ್ರಾಮೋದ್ಯೋಗ ಕಸಬುದಾರರ ಕೈಗಾರಿಕ ವಿವಿಧೋದ್ದೇಶ ಸಹಕಾರ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳಲ್ಲಿ ಸಾಲ ಮಾಡಿದವರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಸಂಘಗಳು ಅಭಿವೃದ್ದಿ ಹೊಂದಿ ರೈತರಿಗೆ ಮತ್ತೆ ಸಾಲ ನೀಡಬಹುದು, ಸರ್ಕಾರ ತಂದಿರುವ ಹಲವಾರು ಯೋಜನೆಗಳು ರೈತರಿಗೆ ಹಾಗೂ ಸ್ವಂತ ಕಸುಬುಗಳನ್ನು ಹೊಂದಿದವರಿಗೆ ಅನುಕೂಲವಾಗಿದೆ ಎಂದರು.
ಅನಂತಕುಮಾರಿ ಚಿನ್ನಪ್ಪ ಮಾತನಾಡಿ ಪ್ರತಿಯೊಂದು ಸಮುದಾಯದ ಕುಲಕಸಬುಗಳಾದ ಚಿನ್ನದ ಕೆಲಸ, ಕಬ್ಬಿಣದ ಕೆಲಸ, ಮರಗೆಲಸ ಸೇರಿದಂತೆ ಅವರವರ ಕೆಲಸಗಳಿಗೆ ಹಲವಾರು ಕಾರ್ಯಯೋಜನೆಗಳಿದ್ದು ಸದುಪಯೋಗ ಪಡೆದುಕೊಳ್ಳಬೇಕು, ಖಾದಿ ಬೋರ್ಡ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರಿಗೆ ಕಡೆಮೆ ಬಡ್ದಿ ದರದಲ್ಲಿ ದೊರೆಯುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮೋದ್ಯೋಗ ಕಸಬುದಾರರ ಕೈಗಾರಿಕ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್.ಶ್ರೀನಿವಾಸÀಮೂರ್ತಿ ಆಯವ್ಯಯ ಮಂಡಿಸಿ ಮಾತನಾಡಿ ಈ ಸಾಲಿನಲ್ಲಿ ಹೆಚ್ಚು ಲಾಭ ಹೊಂದಿದೆ ಮುಂದಿನ ವರ್ಷಗಳಲ್ಲಿ ಇನ್ನೂ ಅಧಿಕ ಲಾಭಾಂಶ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಆರ್.ಜಯರಾಮ್ ಮಾತನಾಡಿ ಮಾಸಿಕ ಸುಮಾರು 2ಲಕ್ಷಕ್ಕೂ ಅಧಿಕ ಬಾಡಿಗೆ ಸಂಗ್ರಹವಾಗುತ್ತಿದೆ, ಕಟ್ಟಡ ನಿರ್ಮಾಣಕ್ಕೆ ಅನೇಕರು ಸಹಕಾರ ನೀಡಿದ್ದರ ಪ್ರತಿಪಲ ನಾವು ಇಂದು ಉತ್ತಮ ಕಟ್ಟಡವನ್ನು ನಿರ್ಮಾಣಮಾಡಿದ್ದೇವೆ ಗುಡಿ ಕೈಗಾರಿಕೆ ನಡೆಸುವವರಿಗೆ ಉತ್ತೇಜನ ನೀಡಿ ಆರ್ಥಿಕವಾಗಿ ಸದೃಡರನ್ನಾಗಿ ಮಾಡುವ ಅನೇಕ ತರಬೇತಿಗಳನ್ನು ನೀಡಿ ಅವರ ಕಸುಬಿಗೆ ತಕ್ಕಂತೆ ಯಂತ್ರೋಪಕರಣಗಳನ್ನು ನೀಡಿ ಅವರ ಜೀವನ ನಿರ್ವಹಣೆ ಮಾಡಿಕೊಳ್ಳುವ ಕೆಲಸ ಸಂಘ ಮಾಡುತ್ತಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ನಡೆದರೆ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿದೆ ಎಂದರು.
ಬಯಪ ಅಧ್ಯಕ್ಷ ಶಾಂತಕುಮಾರ್ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಅಣ್ನೇಶ್ವರ ಚಂದ್ರಶೇಖರ್, ಸಂಘದ ಉಪಾಧ್ಯಕ್ಷೆ ಮಂಜುಳ ಮೋಹನ್ ಮುನಿರಾಜು, ರಾಮಚಂದ್ರಪ್ಪ, ಎಂ. ನಾರಾಯಣಸ್ವಾಮಿ, ಶ್ರೀರಾಮಯ್ಯ ರಾಧಮ್ಮ ಮಾದವಿ, ಬೈರೇಗೌಡ, ನಿರ್ದೇಶಕರಾದ ಕೆ.ಪಟಾಲಪ್ಪ, ಎಂ. ಶ್ರೀನಿವಾಸ್, ಎಸ್. ನಾಗೇಗೌಡ, ಆರ್. ಜಯರಾಮ್, ಬಿ.ಎಂ. ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಸುನಂದಮ್ಮ ಚಂದ್ರಪ್ಪ, ಹೆಚ್ ಆರ್. ವಾಸುದೇವ, ಮುಂತಾದವರು ಇದ್ದರು.