ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವಿಐಪಿ ಅತಿಥಿಗಳು, ಅಭಿಮಾನಿಗಳು ಹಾಗೂ ಬಂಧು ಗಳ ಸಮ್ಮುಖದಲ್ಲಿ ತಮ್ಮ ಮದುವೆಯನ್ನು ಕೊಡವ ಸಂಪ್ರದಾಯದ ಪ್ರಕಾರ ಮಾಡಿಕೊಂಡ ಈ ಜೋಡಿ ಈಗ ಸಿಹಿ ಸುದ್ದಿ ಕೊಟ್ಟಿದೆ.
ಹರ್ಷಿಕಾ ಈಗ ಐದು ತಿಂಗಳ ಗರ್ಭಿಣಿ. ಇದೇ ಅಕ್ಟೋಬರ್ ತಿಂಗಳಲ್ಲಿ ತಮ್ಮ ಪಾಪುವಿನ ಆಗಮನವನ್ನು ತಿಳಿಸಲು ಪಕ್ಕಾ ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ ‘ಐನ್ ಮನೆ’ (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಿಂಬಿಸುವ ಶೈಲಿಯಲ್ಲಿ ಒಂದುಪೋಟೋ ಶೂಟ್ ಹಾಗು ಅದ್ಭುತವಾದ ವಿಡಿಯೋ ವನ್ನು ಮಾಡಿ ಅಭಿಮಾನಿ ಗಳಿಗೆ ಅರ್ಪಿಸಿದ್ದಾರೆ.
“ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ” ಎಂದು ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಸಿಹಿ ಸುದ್ದಿ ಹಂಚಿ ಸಂತಸ ತಂದಿದ್ದಾರೆ.